ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 36ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 177 ರನ್‍ಗಳ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕ ರಾಹುಲ್(77), ಗೇಲ್(24), ಪೂರನ್(24) ಹಾಗು ದೀಪಕ್ ಹೂಡ (23) ಅವರ ಬ್ಯಾಟಿಂಗ್ ನೆರವಿನಿಂದ ಸಮಬಲ ಸಾಧಿಸಿತ್ತು. ಬಳಿಕ ನಡೆದ ಸೂಪರ್ ಓವರ್ ಸಹ ಟೈ ಆದಾಗ, 2ನೇ ಸೂಪರ್ ಓವರ್‌ನಲ್ಲಿ ಗೇಲ್ & ಮಯಂಕ್ ಅಗರವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂಜಾಬ್ 2 ಎಸೆತ ಬಾಕಿ ಉಳಿಸಿ ಗೆಲುವು ದಾಖಲಿಸಿತು. ಮುಂಬೈ ಪರ ಬುಮ್ರಾ 3 ವಿಕೆಟ್, ರಾಹುಲ್ ಚಾಹರ್ 2 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(53), ಕೃಣಾಲ್ ಪಾಂಡ್ಯ(34), ಪೊಲಾರ್ಡ್(34*) ಹಾಗು ನಾತನ್ ಕೋಲ್ಟಾರ್ ನೈಲ್(24*) ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಕಿಂಗ್ಸ್ ಇಲೆವೆನ್ ಪಂಜಾಬ್ ಪರ, ಮಹಮದ್ ಶಮಿ, ಅರ್ಶದೀಪ್ ಸಿಂಗ್ ತಲಾ 2 ವಿಕೆಟ್, ಕ್ರಿಸ್ ಜೋರ್ಡನ್, ರವಿ ಬಿಶ್ನೋಯ್ ತಲಾ 1 ವಿಕೆಟ್ ಪಡೆದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಕೆ ಎಲ್ ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್