Panchayatraj Award: ಪಂಚಾಯತ್ ರಾಜ್ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಜಿಲ್ಲಾ ಪಂಚಾಯತ್ ಯೋಜನ ವಿಭಾಗದ ಮುಖ್ಯ ಯೋಜನಾಧಿಕಾರಿ ವಿನೋದ ವಾಮನ್ ಅನ್ವೇಕರ್ ಮತ್ತು ಜಿ.ಪಂ. ಆಡಳಿತ ಶಾಖೆಯ ಸಹಾಯಕ ನಿರ್ದೇಶಕ…

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಜಿಲ್ಲಾ ಪಂಚಾಯತ್ ಯೋಜನ ವಿಭಾಗದ ಮುಖ್ಯ ಯೋಜನಾಧಿಕಾರಿ ವಿನೋದ ವಾಮನ್ ಅನ್ವೇಕರ್ ಮತ್ತು ಜಿ.ಪಂ. ಆಡಳಿತ ಶಾಖೆಯ ಸಹಾಯಕ ನಿರ್ದೇಶಕ ಸುನೀಲ ಡಿ‌. ನಾಯ್ಕ ಅವರಿಗೆ ನ.1 ರಂದು ಕಾರವಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿನೋದ ವಾಮನ್ ಅನ್ವೇಕರ ಮುಖ್ಯ ಯೋಜನಾಧಿಕಾರಿ ಯೋಜನಾ ವಿಭಾಗ ಜಿಲ್ಲಾ ಪಂಚಾಯತ ಉತ್ತರ ಕನ್ನಡ ಕಾರವಾರ ಇವರು ದಿನಾಂಕ 31/10/1989 ರಂದು ಸಹಾಯಕ ಸಾಂಖ್ಯಿಕ ಅಧಿಕಾರಿ ಆಗಿ ಸರ್ಕಾರಿ‌ ಸೇವೆಗೆ ಸೆರ್ಪಡೆಗೊಂಡಿರುತ್ತಾರೆ. ಪ್ರಸ್ತುತ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಮುಖ್ಯ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಪಂಚಾಯತದ ವಾರ್ಷಿಕ ಕರುಡು ಯೋಜನೆ ಹಾಗೂ ಎಲ್ಲಾ ಇಲಾಖೆಯ ಕ್ರೀಯಾ ಯೋಜನೆಗಳು ಸಿದ್ಧಪಡಿಸಿಕೊಂಡು ಅವುಗಳ ಅನುಮೋದನೆ ನೀಡುವ ಕರ್ತವ್ಯ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ವಸತಿ ಯೋಜನೆಯ ನೋಡಲ್ ಅಧಿಕಾರಿ ಹಾಗೂ ಹೊನ್ನಾವರ ತಾಲೂಕಾ ಪಂಚಾಯತದ ಆಡಳಿತಾಧಿಕಾರಿಯಾಗಿಯೂ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

Vijayaprabha Mobile App free

ಮುಂಡಗೋಡ ಮತ್ತು ಜೋಯಿಡಾ ತಾಲೂಕುಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದ್ದು ಅದರ ಮೇಲ್ವಿಚಾರಣೆ ಸಹ ಮಾಡುತ್ತಿದ್ದಾರೆ. ಸದ್ರಿಯವರು 2022-23 ನೇ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲೆಯವರು ನೀಡುತ್ತಿರುವ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ರಿಯವರು ಹಲವು ಜನರಿಗೆ ಸಹಾಯ ಹಸ್ತ ನೀಡಿ ಇತರರಿಗೆ ಸ್ಪೂರ್ತಿಯಾಗಿರುತ್ತಾರೆ.

ಸುನೀಲ ಡಿ‌. ನಾಯ್ಕ ಸಹಾಯಕ ನಿರ್ದೇಶಕರು (ಆಡಳಿತ) ಜಿಲ್ಲಾ ಪಂಚಾಯತ ಉತ್ತರ ಕನ್ನಡ ಕಾರವಾರ ರವರು ದಿನಾಂಕ: 06/10/1995 ರಂದು ಸರ್ಕಾರಿ‌ ಸೇವೆಗೆ ಸೇರ್ಪಡೆಗೊಂಡಿರುತ್ತಾರೆ. ಆಡಳಿತಾತ್ಮಕ ವಿಷಯಗಳ ಬಗ್ಗೆ ಉತ್ತಮವಾದ ಜ್ಞಾನವನ್ನು ಹೊಂದಿರುತ್ತಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯ ಮೇಲುಸ್ತುವಾರಿ ಜೊತೆಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಗೊಳಿಸಲು ಪ್ರಮುಖ ಪಾತ್ರವಹಿಸಿರುತ್ತಾರೆ. ವಿಧಾನ ಸಭೆ / ಲೋಕ ಸಭೆ ಚುನಾವಣಾ ಸಂದರ್ಭದಲ್ಲಿ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮಗಳ ರೋಪರೇಷಗಳನ್ನು ಸಿದ್ಧಪಡಿಸಿ ಕಾರ್ಯಕ್ರಮ ಆಯೋಜನೆ ಮಾಡಿರುತ್ತಾರೆ. 

ಇದರ ಫಲವಾಗಿ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ Best Sveep Award ಪ್ರಶಸ್ತಿ ದೊರೆತಿರುತ್ತದೆ. ಸದ್ರಿಯವರು 30/09/2020 ರಿಂದ 24/02/2021 ರ ವರೆಗೆ ಮಾನ್ಯ ಮುಖ್ಯ‌ ಕಾರ್ಯನಿರ್ವಾಹಕ ಅಧಿಕಾರಿ ರವರ ಆಪ್ತ ಸಹಾಯಕರಾಗಿ‌ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸಹಾಯಕ ನಿರ್ದೇಶಕರು (ಆಡಳಿತ) ಹಾಗೂ ಹೆಚ್ಚುವರಿಯಾಗಿ ಸಹಾಯಕ ಕಾರ್ಯದರ್ಶಿ (ಆಡಳಿತ) ವಿಭಾಗದಲ್ಲಿ ಪ್ರಭಾರವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.