ಗದಗದಲ್ಲಿ 2019ರಲ್ಲಿಯೇ ವಕ್ಫ್ ಉಪಟಳ: ತಮ್ಮ ಆಸ್ತಿಗಾಗಿ 315 ರೈತರು ಕೋರ್ಟ್‌ಲ್ಲಿ ಹೋರಾಟ

ಗದಗ: ಜಿಲ್ಲೆಯಲ್ಲಿ 2019ರಲ್ಲಿಯೇ ವಕ್ಫ್ ಉಪಟಳ ನಡೆದಿದ್ದು, 315 ರೈತರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಿ, ತಮ್ಮ ಜಮೀನು ಮರಳಿ ಪಡೆದುಕೊಂಡಿದ್ದಾರೆ. ರಾಜ್ಯಾದ್ಯಂತ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ…

ಗದಗ: ಜಿಲ್ಲೆಯಲ್ಲಿ 2019ರಲ್ಲಿಯೇ ವಕ್ಫ್ ಉಪಟಳ ನಡೆದಿದ್ದು, 315 ರೈತರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಿ, ತಮ್ಮ ಜಮೀನು ಮರಳಿ ಪಡೆದುಕೊಂಡಿದ್ದಾರೆ.

ರಾಜ್ಯಾದ್ಯಂತ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ ಮಾಡಿ ಹಾವಳಿ ಎಬ್ಬಿಸಿರುವ ವಿವಾದವೂ ಗದಗ ಜಿಲ್ಲೆಯಲ್ಲಿ 2019ರಲ್ಲಿ ಆಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸಾಕಷ್ಟು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಯಾಗಿ ಮಾರ್ಪಡಿಸಿದ್ದರು. ಜಿಲ್ಲಾ ‍ವಕ್ಫ್ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1486 ವಕ್ಫ್ ಆಸ್ತಿಗ‍ಳಿವೆ. ಅದರಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದು 689, ಈಗಾಗಲೇ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು 251, ಖಾತಾ ಬದಲಾವಣೆಗೆ ಹೋಗಿರುವುದು 566, ಹೆಚ್ಚುವರಿಯಾಗುವ 20 ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಯಬೇಕಿದೆ.

ಕಂದಾಯ ಇಲಾಖೆಗೆ ಒಳಪಟ್ಟಿದ್ದ 689 ಆಸ್ತಿಗಳಲ್ಲಿ 2019 ಮಾ.21ರಂದು ಅಂದಿನ ಜಿಲ್ಲಾಧಿಕಾರಿಗಳು ಮಾಡಿದ ಆದೇಶನ್ವಯ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿನ 566 ಆಸ್ತಿಗಳ ಖಾತಾ ಬದಲಾವಣೆಯಾಗಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲೆಯ ರೈತರು ಅಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಿ ತಮಗಾದ ಅನ್ಯಾಯ ಸರಿಪಡಿಸಿಕೊಂಡಿದ್ದರು.

Vijayaprabha Mobile App free

ನ್ಯಾಯಾಲಯದಲ್ಲಿ 315 ರೈತರಿಗೆ ಜಯ:

ಜಿಲ್ಲಾಡಳಿತದ ನಿರ್ಧಾರ ಪ್ರಶ್ನಿಸಿ ರೈತರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರ. ಬಳಿಕ ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ಗದಗನ 101, ಮುಂಡರಗಿಯ 5, ನರಗುಂದದ 121, ರೋಣದ 44, ಗಜೇಂದ್ರಗಡದ 24, ಶಿರಹಟ್ಟಿಯ 11 ಹಾಗೂ ಲಕ್ಷ್ಮೇಶ್ವರ ತಾಲೂಕಿನ 9 ಸೇರಿದಂತೆ ಒಟ್ಟು 315 ರೈತರಿಗೆ ಆಸ್ತಿ ಮರಳಿ ದಾಖಲಿಸಲಾಗಿದೆ. ಆದರೆ, ಇನ್ನುಳಿದ 123 ರೈತರ ಆಸ್ತಿಗಳ ಕಾಲಂ ನಂಬರ್ 11ರಲ್ಲಿ ಇಂದಿಗೂ ವಕ್ಫ್‌ ಎಂದು ಇದೆಯೇ? ಆ ಆಸ್ತಿಗಳಿಗೆ ವಾರಸುದಾರರು ಇಲ್ಲವೇ? ಇದುವರೆಗೂ ಯಾವುದೇ ಇತ್ಯರ್ಥವಾಗದೇ ಇರುವುದನ್ನು ಗಮನಿಸಿದಲ್ಲಿ ಮುಂಬರುವ ದಿನಗಳಲ್ಲಿ ಈ ಆಸ್ತಿಗಳು ಸಹಜವಾಗಿಯೇ ವಕ್ಫ್ ಆಸ್ತಿಯಾಗಿ ಅಧಿಕೃತಗೊಳ್ಳಲಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.