ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಸಂಪತ್ತನ್ನು ಬಹಿರಂಗಪಡಿಸಿದ್ದು ಒಟ್ಟು ₹2.85 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರ 2019ರಲ್ಲಿ ₹2.49 ಕೋಟಿ ಇತ್ತು. ಈಗ 2020ರ ಜೂನ್ 30ಕ್ಕೆ ಅನ್ವಯವಾಗುವಂತೆ ₹2.85 ಕೋಟಿ ಆಗಿದೆ ಎಂದು ಘೋಷಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಹತ್ತಿರ ಪ್ರಸ್ತುತ ನಗದು ರೂಪದಲ್ಲಿ ₹31,450, ಉಳಿತಾಯ ಖಾತೆಯಲ್ಲಿ ₹3.38 ಲಕ್ಷ ರುಪಾಯಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ನರೇಂದ್ರ ಮೋದಿಯವರು ಗಾಂಧಿನಗರ ಎಸ್ಬಿಐ ಶಾಖೆಯಲ್ಲಿರುವ ಎಫ್ಡಿಯಲ್ಲಿ ೨೦೧೯ ರಲ್ಲಿ ೧,೨೭,೮೧,೫೭೪ ಇದ್ದ ಮೊತ್ತ ಈಗ ₹1,60,28,039 ಆಗಿದೆ.ನರೇಂದ್ರ ಮೋದಿ ಅವರ ಬಳಿ ನಾಲ್ಕು ಚಿನ್ನದ ಉಂಗುರಗಳು ಸೇರಿ ಒಟ್ಟು 45 ಗ್ರಾಂ ಚಿನ್ನ ಹೊಂದಿದ್ದು, ಅದರ ಮೌಲ್ಯ 1,51,875 ಆಗಿದೆ ಎಂದು ಘೋಷಿಸಿಕೊಂಡಿದ್ದಾರೆ.
ಇನ್ನು ನರೇಂದ್ರ ಮೋದಿಯವರ ಬಳಿ ಒಂದು ಮನೆ ಮತ್ತು ಸೈಟ್ ಇದ್ದು ಅದರ ಬೆಲೆ 1.1 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ.
ಇದನ್ನು ಓದಿ: ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ; ತಮಿಳುಗರಿಂದ ತೀವ್ರ ವಿರೋಧ..!