ಉತ್ತರ ಕನ್ನಡ: ಬಿಜೆಪಿಗರು ಮಹಾತ್ಮ ಗಾಂಧಿ ನೆನಪಿಸೋದು ದುಡ್ಡಲ್ಲಿ ಮಾತ್ರ. ದುಡ್ಡನ್ನು ಕೊಡೋದು ರಿಸೈನ್ ಮಾಡಿಸೋದು, ಚುನಾವಣೆಗೆ ಹೋಗೋದು, ಚುನಾವಣೆಯಲ್ಲಿ ದುಡ್ಡು ಹಂಚೋದು. ಇದೇ ಬಿಜೆಪಿಗರ ಕೆಲಸ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪ ಮಾಡಿದ್ದಾರೆ.
ಶಿರಸಿಯಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿಗರು ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದಿಲ್ಲ. ನೂರರ ಗಡಿ ದಾಟಿಲ್ಲ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗರು 110 ಸೀಟಿನ ಮುಂದೆ ಪಾಸಾಗಿದ್ದಾರೆಯೇ? ಅವರಿಗೆ ಕೆಟ್ಟ ಬುದ್ಧಿಯಲ್ಲದೇ ಒಳ್ಳೇ ಬುದ್ಧಿ ಬರುತ್ತಾ? ಯಾವತ್ತು ಮುಂದೆಯಿಂದ ಬಂದಿದ್ದಾರೆ? ಎಲ್ಲಾ ಸೈಡ್, ಬ್ಯಾಕಿನಿಂದ ಬಂದಿದ್ದಾರೆ ಎಂದರು.
ಈಗಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕನಸು ಇಟ್ಟುಕೊಂಡು ಕೂತಿದ್ದಾರೆ. ಖುದ್ದು ಬೇಲಿನ ಮೇಲೆ ಇರುವ ವಿಜಯೇಂದ್ರ ಅವರೇ ಸಿಎಂ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಕಾಮನ್ ಸೆನ್ಸ್ ಇಲ್ಲ:
ಬಿಜೆಪಿಗರೆಲ್ಲರೂ ಕಳ್ಳರೇ. ಮಾನ ಮರ್ಯಾದೆ ಇಲ್ಲ. ಶಾಲೆಗೆ ಶಿಕ್ಷಕರು ಇಲ್ಲ, ಸಮಸ್ಯೆಯಿದೆ ಅಂತಾ ಮಾತಾಡಲಿ. ಅದು ಬಿಟ್ಟು ಬಂಗಾರಪ್ಪಂದು ಹೇರ್ ಕಟ್ಟು, ಇವರದ್ದು ದಾಡಿ ಎಂದು ಫನ್ನಿ ಸ್ಟುಪಿಡ್ ಮಾತನಾಡುತ್ತಾರೆ.ಅವರಿಗೆ ಕಾಮನ್ ಸೆನ್ಸ್ ಕೂಡಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.