ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಮುನಿರತ್ನ ಅವರ ಆಯ್ಕೆ ಅಸಿಂಧುಗೊಳಿಸಿ ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾಗೊಸಿದ ಬೆನ್ನಲ್ಲೇ, ರಾಜ್ಯದ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಇಂದು ಟಿಕೆಟ್ ಘೋಷಣೆ ಮಾಡಿದೆ.
ಹೌದು, ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ವಿಚಾರಕ್ಕೆ ಪರಿಹಾರ ದೊರೆತಿದ್ದು, ರಾಜರಾಜೇಶ್ವರಿ ನಗರದ ಟಿಕೆಟ್ ನ್ನು ಮುನಿರತ್ನ ಅವರಿಗೆ ಹಾಗೂ ಶಿರಾ ಕ್ಷೇತ್ರದ ಟಿಕೆಟ್ ನ್ನು ಡಾ.ರಾಜೇಶ್ ಗೌಡ ಅವರಿಗೆ ಘೋಷಣೆ ಮಾಡಿದೆ. ನ.3ರಂದು ಮತದಾನ ನಡೆಯಲಿದ್ದು, ಅದೇ ತಿಂಗಳ 10ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿಂದೆ ಮುನಿರತ್ನ ವಿರುದ್ಧ ಪರಾಜಯಗೊಂಡಿದ್ದ ತುಳಸಿ ಮುನಿರಾಜು ಗೌಡ ಅವರೂ ಕೂಡ ಆರ್.ಆರ್.ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇನ್ನು ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಹೆದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ರವಿ ಪತ್ನಿ ಕುಸುಮ ಹನುಮಂತರಾಯಪ್ಪ ಅವರು ಸ್ಪರ್ದಿಸುತ್ತಿದ್ದು,ಈ ಚುನಾವಣೆ ರಾಜ್ಯದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ.