ರಶೀದ್ ಖಾನ್ ಅವರ ಪತ್ನಿ ಅನುಷ್ಕಾ ಶರ್ಮಾ..? ಏನಿದರ ಒಳಮರ್ಮ

ದೆಹಲಿ: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರು ಗಂಡ ಹೆಂಡತಿ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ವಿರುಷ್ಕಾ ದಂಪತಿಯೆಂದೇ ಪ್ರಖ್ಯಾತಿ ಪಡೆದಿದ್ದಾರೆ. ಈಗಿರುವಾಗ ಅಫಘಾನಿಸ್ತಾನದ ಬೌಲರ್…

Rashid khan anushka sharma vijayaprabha

ದೆಹಲಿ: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರು ಗಂಡ ಹೆಂಡತಿ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ವಿರುಷ್ಕಾ ದಂಪತಿಯೆಂದೇ ಪ್ರಖ್ಯಾತಿ ಪಡೆದಿದ್ದಾರೆ. ಈಗಿರುವಾಗ ಅಫಘಾನಿಸ್ತಾನದ ಬೌಲರ್ ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಎಂಬ ಸುದ್ದಿ ಹರಿದಾಡುತ್ತಿದೆ.

ಇದಕ್ಕೆ ಕಾರಣ ‘ರಶೀದ್ ಖಾನ್ ಅವರ ಪತ್ನಿ’ ಯಾರು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಟಿ ಅನುಷ್ಕಾ ಶರ್ಮಾ ಅವರ ಹೆಸರು ಕಾಣುತ್ತದೆ. ವಾಸ್ತವವಾಗಿ ಬೌಲರ್ ರಶೀದ್ ಖಾನ್ ಅವರಿಗೆ ಇನ್ನು ಮದುವೆಯಾಗಲಿಲ್ಲ. ಆದರೆ ಈ ಸುದ್ದಿ ಏಕೆ ಹರಿದಾಡುತ್ತಿದೆ ಆಶ್ಚರ್ಯಕರವಾಗಿದೆ.

ರಶೀದ್ ಖಾನ್ ಅವರು 2018 ರಲ್ಲಿ ತಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಜೊತೆ ಮಾತನಾಡುತ್ತಾ, ನಿಮ್ಮ ನೆಚ್ಚಿನ ನಾಯಕಿ ಯಾರು ಎಂಬ ಪ್ರಶ್ನೆಗೆ? ತಮ್ಮ ನೆಚ್ಚಿನ ನಾಯಕಿ ಅನುಷ್ಕಾ ಶರ್ಮಾ ಮತ್ತು ಪ್ರೀತಿ ಜಿಂಟಾ ಎಂದು ಹೇಳಿದ್ದರು. ಅಂದಿನಿಂದ ಸುದ್ದಿ ಟ್ರೆಂಡಿಂಗ್ ಆಗಿತ್ತು. ರಶೀದ್ ಖಾನ್ ಅವರ ನೆಚ್ಚಿನ ನಟಿ ಅನುಷ್ಕಾ ಶರ್ಮಾ ಎಂದು ಹೆಚ್ಚಿನ ಸುದ್ದಿಗಳು ಬಂದವು. ಅಂದಿನಿಂದ ಗೂಗಲ್ ಈಗೆ ತೋರಿಸುತ್ತಿದೆ. ನೀವು ತಿಳಿಯಬೇಕಿದ್ದರೆ ಗೂಗಲ್ ಸರ್ಚ್ ಮಾಡಿ ನೋಡಬಹುದು.

Vijayaprabha Mobile App free

ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಅವರು ಸದ್ಯ ಯುಎಇ ನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.