ವಿಜಯಪ್ರಭ.ಕಾಂ ವಿಶೇಷ, ಬೆಂಗಳೂರು: ಈಚೆಗೆ ವಿವಿಧ ಹುದ್ದೆಗಳ ಭರ್ತಿಗೆ ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿದ್ದು, ತೆಂಗಾಣ ಮಾದರಿ ಸ್ಪರ್ಧಾತ್ಮಕ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್.ಕಾಂ ನಲ್ಲಿ ಕನ್ನಡಪರ ಹೋರಾಟಗಾರ ಕಾಂತಕುಮಾರ್ ಸೇರಿದಂತೆ ಹಲವರು ಸರ್ಕಾರವವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಎಸ್ಎಸ್ಎಲ್ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿ ಸೂಚನೆ ಹೊರಡಿಸಲಾಗಿದೆ. ತೆಲಂಗಾಣ ಮಾದರಿಯಲ್ಲಿ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ಬಹುತೇಕ ಆಕಾಂಕ್ಷಿಗಳಲು ಆಗ್ರಹಿಸಿದ್ದಾರೆ.
ಈ ಬಗ್ಗೆ ಈಗಾಗಲೇ ನಮ್ಮ ಸಂಘಟನೆಯಲ್ಲಿ ಆಂತರಿಕವಾಗಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಯಾವ ರೀತಿಯ ಹೋರಾಟ ಮಾಡಬೇಕೆಂಬ ಬಗ್ಗೆ ಆಕಾಂಕ್ಷಿಗಳೊಂದಿಗೆ ವಿಷಯ ಹಂಚಿಕೊಳ್ಳಲಾಗುವುದು. ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಎಲ್ಲಾ ಆಕಾಂಕ್ಷಿಗಳಿಗೂ ನ್ಯಾಯ ಒದಗಿಸಲು ಸಂಘಟನೆಯೂ ಬದ್ಧವಾಗಿದೆ ಎಂದು ಕಾಂತಕುಮಾರ್ ಬರೆದುಕೊಂಡಿದ್ದಾರೆ.
Read this: ತೆಲಂಗಾಣ ಕಾಂಗ್ರೆಸ್ಸಿಂದಲೂ ಜಾತಿ ಗಣತಿ: ಶೀಘ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ
ಕೆಪಿಟಿಸಿಎಲ್ ಹುದ್ದೆ:ತೆಲಂಗಾಣ ಮಾದರಿ ಅನುಸರಿಸಿ
ಕೆಪಿಟಿಸಿಎಲ್ ಹುದ್ದೆ: 2022 ರಲ್ಲಿ ತೆಲಂಗಾಣ ರಾಜ್ಯದಲ್ಲಿ 1000 ಜೂನಿಯರ್ ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆ ರಾಜ್ಯದ ವಿದ್ಯುತ್ ಪ್ರಸರಣ ನಿಗಮ ಮಂಡಳಿಯು ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಆಯ್ಕೆ ಮಾಡಿಕೊಂಡಿದೆ. ಅದೇ ರೀತಿ, ಪ್ರಸ್ತುತ ಕೆಪಿಟಿಸಿಎಲ್ ಲೈನ್ ಮ್ಯಾನ್ ನೇಮಕಾತಿಯಲ್ಲಿ ಇದೇ ಮಾದರಿಯನ್ನು ನಮ್ಮ ರಾಜ್ಯದಲ್ಲೂ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.
ಲೈನ್ ಮ್ಯಾನ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನಡೆಯಬೇಕು ಮತ್ತು ವಯೋಮಿತಿ ಹೆಚ್ಚಳವಾಗಬೇಕು ಎಂದು ಶಶಿ ಎಂಬುವವರು ಮನವಿ ಮಾಡಿದ್ದಾರೆ. ಜತೆಗೆ ನಂದನ್ ಕುಮಾರ್ ಎಸ್.ಕೆ. ಎಂಬುವವರು “ವಿಲೇಜ್ ಅಕೌಂಟೆಂಟ್ ಹುದ್ದೆಗೆ ಮೊದಲು ದ್ವಿತೀಯ ಪಿಯುಸಿ ಶೇಕಡ ಮೇಲೆ ನೇಮಕ ಮಾಡುತ್ತಿದ್ದರು ಅದೇ ಪ್ರಸ್ತುತ ನೇಮಕಾತಿಯಲ್ಲಿ ಶೇಕಡವನ್ನು ತೆಗೆದುಹಾಕಿ ಇವಾಗ ಕೆಎ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಮಾಡಬೇಕೆಂದು ತೀರ್ಮಾನಿಸಿದ್ದಾರೆ ಆದ್ದರಿಂದ ನೀವು ಸಹ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದಾರೆ.