ಭಾರತ ಮತ್ತು ಪಾಕಿಸ್ತಾನ ನಿಷ್ಠುರತೆ ಬಿಟ್ಟು ಚರ್ಚೆ ನಡೆಸಬೇಕು: ಪಾಕ್ ಸಚಿವ ಬಿಲಾವಲ್‌ ಭುಟ್ಟೋ ಕರೆ

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ನಿಷ್ಠುರತೆ ಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಮಾಜಿ ಸಚಿವ ಬಿಲಾವಲ್ ಭುಟ್ಟೂ ಕರೆ ನೀಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ…

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ನಿಷ್ಠುರತೆ ಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಮಾಜಿ ಸಚಿವ ಬಿಲಾವಲ್ ಭುಟ್ಟೂ ಕರೆ ನೀಡಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಮಾತನಾಡಿದ ಪಿಪಿಪಿ ಅಧ್ಯಕ್ಷ ಭುಟ್ಟೋ ‘ಎರಡು ದೇಶಗಳು ಯಾಕೆ ತುಂಬಾ ಕಟ್ಟುನಿಟ್ಟಾಗಿರಬೇಕು. ಶಾಂಘೈ ಶೃಂಗಸಭೆಯ ದ್ವಿಪಕ್ಷೀಯ ಮಾತುಕತೆ ನಡೆಸುವ ಬಗ್ಗೆ ಎರಡೂ ದೇಶಗಳು ಯೋಚಿಸಬೇಕು. ಇವತ್ತಾಗಲಿ ನಾಳೆಯಾಗಲಿ ಸಂವಾದ ಅಗತ್ಯ. ಇದು ಎಸ್‌ಸಿಒ ಸಂದರ್ಭದಲ್ಲಿ ಅಲ್ಲದಿದ್ದರೂ, ಎರಡೂ ದೇಶಗಳು ಬೇಗ ಅಥವಾ ನಂತರ ದ್ವಿಪಕ್ಷೀಯ ಮಾತುಕತೆಗಳನ್ನು ಪುನಾರಂಬಿಸಬೇಕಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನ್ವರ್‌ ಸಹ ಒಲವು:

ಪಾಕಿಸ್ತಾನದ ಮಾಜಿ ಹಂಗಾಮಿ ಪ್ರಧಾನಿ ಅನ್ವರ್‌-ಉಲ್-ಹಕ್‌ ಕಾಕರ್‌ ಕೂಡಾ ಭಾರತದೊಂದಿಗಿನ ತನ್ನ ಸಂಬಂಧದಲ್ಲಿ ಸುಧಾರಣೆ ಕಾಣಲು ಪಾಕಿಸ್ತಾನದಲ್ಲಿ ಆಳವಾದ ಹಸಿವು ಇದೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.