ಉಡುಪಿ: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಪರ್ಯಾಯ ಪುತ್ತಿಗೆ ಮಠ ಹಾಗೂ ಕೃಷ್ಣ ಮಠದ ಆಶ್ರಯದಲ್ಲಿ ಅಭಿಗ್ನಾ ನೃತ್ಯಾಲಯಂ ವತಿಯಿಂದ 100 ಮಂದಿ ಕಲಾವಿದರು ನಿರಂತರ 14 ಗಂಟೆಗಳ ನೃತ್ಯ ಮಾಡಲಿದ್ದಾರೆ.
ನಗರದ ಮಧ್ವ ಮಂಟಪದಲ್ಲಿ ಅ.17ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನೃತ್ಯಾಲಯದ ಮುಖ್ಯಸ್ಥೆ ಚಂದ್ರಭಾನು ಚತುರ್ವೇದಿ ತಿಳಿಸಿದ್ದಾರೆ.
ಹೈದರಾಬಾದ್, ವಾರಂಗಲ್, ವಿಜಯವಾಡ, ಚೆನ್ನೈ, ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು ಕರ್ನಾಟಕ ಶಾಸ್ತ್ರೀಯ ನೃತ್ಯ, ಭರತನಾಟ್ಯಂ, ಕೂಚುಪುಡಿ, ಆಂಧ್ರನಾಟ್ಯಂ, ವೋಕಲ್ ಸೇರಿ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದರು.
ಸ್ವಾಮೀಜಿ ಚಾಲನೆ:
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮಧ್ವಮಂಟಪದಲ್ಲಿ ನೃತ್ಯ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ರಾತ್ರಿ 9 ಗಂಟೆಗೆ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ಸುಮಾರು 5 ವರ್ಷದಿಂದ 60 ವರ್ಷದವರೆಗಿನ ಎ ಶ್ರೇಣಿಯ ಕಲಾವಿದರು ಭಾಗವಹಿಸಲಿದ್ದಾರೆ. ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಅನುಷಾ ಮೊದಲಾದವರು ಉಪಸ್ಥಿತ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.