Killed by Rowdy: ಪೊಲೀಸ್ ಪೇದೆಯ‌ ಪತ್ನಿ, ಮಗುವನ್ನ ಕೊಂದು ಎಸೆದ ರೌಡಿಶೀಟರ್!

ರಾಯ್‌ಪುರ: ಉತ್ತರ ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನ ಪತ್ನಿ ಮತ್ತು ಮಗಳನ್ನು ರೌಡಿಶೀಟರ್ ಬರ್ಬರವಾಗಿ ಕೊಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯ ಶವಗಳು ಅಪರಾಧ…

ರಾಯ್‌ಪುರ: ಉತ್ತರ ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನ ಪತ್ನಿ ಮತ್ತು ಮಗಳನ್ನು ರೌಡಿಶೀಟರ್ ಬರ್ಬರವಾಗಿ ಕೊಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಲೆಯಾದ ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯ ಶವಗಳು ಅಪರಾಧ ನಡೆದ ಸ್ಥಳದಿಂದ ಐದು ಕಿಮೀ ದೂರದಲ್ಲಿರುವ ಕೃಷಿ ಕ್ಷೇತ್ರದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕುಲದೀಪ್ ಸಾಹು ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ತಾಲಿಬ್ ಶೇಖ್ ಅವರ ಮನೆಗೆ ನುಗ್ಗಿ ಅವರ ಪತ್ನಿ ಮೆಹನಾಜ್ (35) ಮತ್ತು ಆಲಿಯಾ (11) ಅವರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಟಣದಲ್ಲಿ ದುರ್ಗಾ ಮೂರ್ತಿ ನಿಮಜ್ಜನದ ವೇಳೆ ಆರೋಪಿಯು ಪೊಲೀಸ್ ಪೇದೆಯೊಂದಿಗೆ ಜಗಳವಾಡಿ ಬಿಸಿ ಎಣ್ಣೆ ಸುರಿದಿದ್ದು, ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಅವರು ತಮ್ಮ ಪೊಲೀಸರ ತಂಡದೊಂದಿಗೆ ರೌಡಿಯನ್ನ ಬಂಧಿಸಲು ಸ್ಥಳಕ್ಕೆ ತೆರಳಿದ್ದರು. ಆಗ ಕೂಡ ತನ್ನ ನಾಲ್ಕು ಚಕ್ರದ ವಾಹನದೊಂದಿಗೆ ಪೇದೆಯ ಮೇಲೆ ವಾಹನ ಹಾಯಿಸಲು ಪ್ರಯತ್ನಿಸಿದ್ದು, ತನ್ನನ್ನು ತಾನು ಉಳಿಸಿಕೊಳ್ಳುವಲ್ಲಿ ಪೇದೆ ಯಶಸ್ವಿಯಾಗಿದ್ದರು.

Vijayaprabha Mobile App free

ಆರೋಪಿಯನ್ನು ಬಂಧಿಸಲು ಪೊಲೀಸರು ಬೆನ್ನಟ್ಟುತ್ತಿದ್ದಾಗ ಪೊಲೀಸರ ಮೇಲೆಯೇ ಆತ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ, ಪೇದೆಯು ಮನೆಗೆ ಹಿಂದಿರುಗಿದಾಗ ಅವರ ಪತ್ನಿ ಮತ್ತು ಮಗಳು ಕಾಣೆಯಾಗಿದ್ದರು. ಮನೆಯಲ್ಲಿ ರಕ್ತದ ಕಲೆಗಳನ್ನು ನೋಡಿ ದಿಗ್ಭ್ರಾಂತರಾದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಅಪರಾಧ ಸ್ಥಳದಿಂದ ಐದು ಕಿಮೀ ಸುತ್ತಲಿನ ಕೃಷಿ ಕ್ಷೇತ್ರದಲ್ಲಿ ಪತ್ತೆ ಮಾಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಇತ್ತ ಎನ್‌ಎಸ್‌ಯುಐನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂದು ಕಳೆದ ವರ್ಷ ಕಾಂಗ್ರೆಸ್ ನ್ಯಾಯ ಯಾತ್ರೆಯಲ್ಲಿ ಆರೋಪಿಗೆ ವಿತರಿಸಿದ ಗುರುತಿನ ಚೀಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.