ಮುಂಬೈ: ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ನವರಾತ್ರಿಯ ಆಚರಣೆಯ ಭಾಗವಾಗಿ ಮುಂಬೈನ ಮೆಟ್ರೋದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ಪೂಜಾ ಭಟ್ ವಿರುದ್ಧ ಗರಂ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಾಗ ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮೆಟ್ರೋ ಒಳಗಡೆ ಮತ್ತು ನಿಲ್ದಾಣದಲ್ಲಿ ಮಹಿಳೆಯರು ಹಾಗೂ ಪರುಷರಿದ್ದ ಹಿಂದೂಗಳ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗುವುದರ ಜತೆಗೆ ಗರ್ಬಾ ಹಾಡುಗಳನ್ನು ಹಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ದೃಶ್ಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ನಟಿ ಪೂಜಾ ಭಟ್ ಅವರು, ‘ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಅನುಮತಿಸಲಾಗಿದೆ. ಇದು ಸಾರ್ವಜನಿಕ ಸ್ಥಳದ ದುರುಪಯೋಗ’ ಎಂದು ಬರೆದುಕೊಂಡಿದ್ದಾರೆ.
ನಟಿಯ ಟ್ವಿಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೀಟ್ಟಿಗರು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಮುಸ್ಲಿಮರು ನಮಾಜ್ ಮಾಡುವಾಗ ಎಲ್ಲಿ ಹೋಗಿದ್ದೀರಿ? ಆ ಕುರಿತು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ನಟಿಯನ್ನು ಕಾಮೆಂಟನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.