ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತವೆ..!

ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ..! ಅತಿಯಾದ ಆಲ್ನೋಹಾಲ್‌ ಸೇವನೆ ಜಡ ಜೀವನಶೈಲಿ ರೋಗ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಸಾಕಷ್ಟು ವಿಶ್ರಾಂತಿ ಕೊರತೆ ಹೆಚ್ಚು ಜಂಕ್ ಫುಡ್ ಸೇವನೆ ಒತ್ತಡವನ್ನು ತಪ್ಪಾಗಿ…

Heart-Attack-vijayaprabha-news

ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ..!

  1. ಅತಿಯಾದ ಆಲ್ನೋಹಾಲ್‌ ಸೇವನೆ
  2. ಜಡ ಜೀವನಶೈಲಿ
  3. ರೋಗ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ
  4. ಸಾಕಷ್ಟು ವಿಶ್ರಾಂತಿ ಕೊರತೆ
  5. ಹೆಚ್ಚು ಜಂಕ್ ಫುಡ್ ಸೇವನೆ
  6. ಒತ್ತಡವನ್ನು ತಪ್ಪಾಗಿ ನಿರ್ವಹಿಸುವುದು
  7. ಧೂಮಪಾನ

1. ಅತಿಯಾದ ಆಲ್ನೋಹಾಲ್‌ ಸೇವನೆ

ಮದ್ಯಪಾನಗಳಂತಹ ವ್ಯಸನಗಳು ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದ್ದು, ಈ ವ್ಯಸನಗಳು ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಆಲ್ನೋಹಾಲ್ ಸೇವನೆಯು ಹೃದಯದ ಸ್ನಾಯುವಿನ ಕಾಯಿಲೆಯಾದ ಆಳ್ಕೊಹಾಲಿಕ್ ಕಾರ್ಡಿಯೋಮಯೋಪತಿಗೆ ಕಾರಣವಾಗಬಹುದು.

2. ಜಡ ಜೀವನಶೈಲಿ

ಅನಾರೋಗ್ಯಕರ ಜೀವನಶೈಲಿಯಿಂದಾಗಿ ಸಾಮಾನ್ಯ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಏರಿಕೆಯಾಗುತ್ತಿದೆ. ಇಂದಿನ ದಿನದಲ್ಲಿ ಕೆಲಸ ಮತ್ತಿತ್ತರ ಸಮಸ್ಯೆ ಕಾರಣದಿಂದ ತಡವಾಗಿ ಮಲಗುವ, ಏಳುವ ಅಭ್ಯಾಸ ಮಾಡಿಕೊಂಡಿದ್ದು, ಸಮಯದ ಕೊರತೆಯು ತಿನ್ನುವ ಅಥವಾ ಮಲಗುವ ಅಭ್ಯಾಸಗಳು ಹೃದಯದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

3. ರೋಗ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ

ಹೃದಯ ಸ೦ಬ೦ಧಿ ಕಾಯಿಲೆಗಳಿದ್ದರೆ, ಹೃದಯವು ಆಗಾಗ್ಗ ಲಕ್ಷಣಗಳನ್ನು ನೀಡುತ್ತದೆ. ಎದೆನೋವು, ನಿರ೦ತರವಾಗಿ ಅಧಿಕ ಹೃದಯ ಬಡಿತದ ಲಕ್ಷಣ ಕಂಡು ಬ೦ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಹೃದಯದ ಕಾಯಿಲೆ ನಿರ್ಲಕ್ಷ್ಯದಿ೦ದಲೇ ಹೆಚ್ಚು ಉಲ್ಬಣವಾಗುತ್ತವೆ.

Vijayaprabha Mobile App free

4. ಸಾಕಷ್ಟು ವಿಶ್ರಾಂತಿ ಕೊರತೆ

ನಿಮ್ಮ ಹೃದಯವು ಆರೋಗ್ಯವಾಗಿರಲು ವಿಶ್ರಾಂತಿಯ ಅಗತ್ಯವಿದೆ. ವಿಶ್ರಾ೦ತಿಯ ಕೊರತೆಯು ಅಧಿಕ ರಕ್ತದೊತ್ತಡ, ಅಸಮರ್ಪಕ ತೂಕ ಇತ್ಯಾದಿಗಳಿಗೆ ಕಾರಣವಾಗಬಹುದು. ಇದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ ಕೆಲಸದ ಜೊತೆಗೆ ಹೃದಯಕ್ಕೂ ವಿಶ್ರಾಂತಿ ನೀಡಿ. ಹೆಚ್ಚು ಟೆನ್ನನ್ ಮಾಡಿಕೊಳ್ಳದೇ ಆರಾಮಾಗಿರಿ.

5. ಹೆಚ್ಚು ಜಂಕ್ ಫುಡ್ ಸೇವನೆ

ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನಾಂಶಗಳು ಹೆಚ್ಚಾಗಿರುವ ಆಹಾರಗಳನ್ನು ಹೆಚ್ಚು ಸೇವಿಸುವುದು ಹೃದಯದ ಆರೋಗ್ಯಕ್ಕೆ ಮಾರಕ. ಜೊತೆಗೆ ಇದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿರುವ ಸ್ಕೂಲಕಾಯ ಮತ್ತು ಅಧಿಕ ತೂಕಕ್ಕೆ ದಾರಿಮಾಡಿಕೊಡುತ್ತದೆ. ಹಾಗೇ ಅಧಿಕ ರಕ್ತದೊತ್ತಡ, ಹೃದಯ ರೋಗ, ಕ್ಯಾನ್ಸರ್‌ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

6. ಒತ್ತಡವನ್ನು ತಪ್ಪಾಗಿ ನಿರ್ವಹಿಸುವುದು

ನಿಮ್ಮ ಒತ್ತಡವನ್ನು ನಿರ್ವಹಿಸಲು ಪ್ರಯತ್ನಿಸದೆ ಹೆಚ್ಚು ಒತ್ತಡ ತೆಗೆದುಕೊ೦ಡರೆ ಹೃದಯದ ಆರೋಗ್ಯ ಹಾಳಾಗುತ್ತದೆ. ಒತ್ತಡವು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ವಿವಿಧ ಒತ್ತಡದ ಸಂದರ್ಭಗಳಲ್ಲಿ ನೀವು ಅದರಿಂದ ಹೊರಬರಲು ಯತ್ನಿಸಬೇಕು. ಯೋಗಾಭ್ಯಾಸ, ಧ್ಯಾನ ಮೊದಲಾದ ಕ್ರಮಗಳಿಂದ ಒತ್ತಡವನ್ನು ನಿರ್ವಹಿಸಲು ಯತ್ನಿಸಿ.

7. ಧೂಮಪಾನ

ಆರೋಗ್ಯದ ಮೇಲೆ ಧೂಮಪಾನದ ಹಾನಿಕಾರಕ ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ಧೂಮಪಾನ ಹೃದಯ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸ‌ರ್ ಸೇರಿದಂತೆ ಗಂಭೀರ ಹೃದಯ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಧೂಮಪಾನ ಮಾಡುವ ವ್ಯಕ್ತಿಯು ಅಧಿಕ ರಕ್ತದ ಒತ್ತಡದಿಂದ ನರಳುವ ಸಂಭವವುಂಟು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.