Devaragudda Karnika 2024 : ‘ಆಕಾಶದತ್ತ ಚಿಗರಿತಲೇ, ಬೇರು ಮುತ್ತಾಯಿತಲೇ ಪರಾಕ್’ ಎಂದ ಗೊರವಯ್ಯ ..!

Devaragudda Karnika 2024 : ದಸರಾ ಪ್ರಯುಕ್ತ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಹೌದು, 9 ದಿನ ಉಪವಾಸವಿದ್ದು, 18 ಅಡಿ ಬಿಲ್ಲನ್ನೇರಿ “ಆಕಾಶದತ್ತ…

Devaragudda Karnika 2024 : ದಸರಾ ಪ್ರಯುಕ್ತ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಹೌದು, 9 ದಿನ ಉಪವಾಸವಿದ್ದು, 18 ಅಡಿ ಬಿಲ್ಲನ್ನೇರಿ “ಆಕಾಶದತ್ತ ಚಿಗರಿತಲೇ, ಬೇರು ಮುತ್ತಾಯಿತಲೇ ಪರಾಕ್” ಎಂದು ಗೊರವಪ್ಪ ನಾಗಪ್ಪಜ್ಜ ಉರ್ಮಿ ಭವಿಷ್ಯ ಹೇಳಿದ್ದಾರೆ.

ಆಕಾಶದತ್ತ ಚಿಗರಿತಲೇ, ಬೇರು ಮುತ್ತಾಯಿತಲೇ ಪರಾಕ್ – ವಿಶ್ಲೇಷಣೆ

ಈ ಕಾರ್ಣಿಕದ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಮಾತನಾಡಿ, ‘ಆಕಾಶದತ್ತ ಚಿಗುರಿತಲೇ’ ಎಂದರೆ ಒಳ್ಳೆ ಮಳೆ ಆಗುತ್ತೆ, ‘ಬೇರೆಲ್ಲ ಮುತ್ತಾಯಿತಲೇ’ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ. ಎಲ್ಲರಿಗೂ ಒಳ್ಳೆಯದಾಗತ್ತೆ ಎಂಬುದು ಇದರ ಅರ್ಥ ಎಂದು ಗೊರವಯ್ಯ ನುಡಿದ ಕಾರ್ಣಿಕದ ವಿಶ್ಲೇಷಣೆ ನೀಡಿದ್ದಾರೆ.

Vijayaprabha Mobile App free

ಗೊರವಯ್ಯ ನುಡಿಯುವ ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ಜನರು ನಂಬುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.