Haryana Election :ಹರಿಯಾಣದಲ್ಲಿ ಇದ್ದಕ್ಕಿದ್ದಂತೆ ಟ್ರೆಂಡ್ ಬದಲಾಗಿದೆ. 65ಕ್ಕೆ ತಲುಪಿದ್ದ ಕಾಂಗ್ರೆಸ್ ಟ್ರೆಂಡ್ ದಿಢೀರ್ ಕುಸಿದಿದೆ.
ಹೌದು, ಹರಿಯಾಣದ ಫಲಿತಾಂಶ ಭಾರೀ ರೋಚಕತೆ ಸೃಷ್ಟಿಸುತ್ತಿದೆ. ಆರಂಭಿಕ ಹಿನ್ನಡೆ ಬಳಿಕ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಅಂಚೆ ಮತ ಎಣಿಕೆ ಬಳಿಕ ಇವಿಎಂ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 49 ಕ್ಷೇತ್ರಗಳಲ್ಲಿ ಲೀಡ್ ಕಾಯ್ದುಕೊಂಡಿದೆ.
ಇನ್ನು, ಕಾಂಗ್ರೆಸ್ ನಿಕಟ ಪೈಪೋಟಿ ಒಡ್ಡಿದ್ದು, 35 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಒಂದೆರಡು ಸುತ್ತಿನ ಮತ ಎಣಿಕೆ ಮಾತ್ರ ಪೂರ್ಣಗೊಂಡಿದ್ದು, ಮಧ್ಯಾಹ್ನದ ಒಳಗೆ ಸ್ಪಷ್ಟ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಮತಗಳಿಸುವಲ್ಲಿ ಕಾಂಗ್ರೆಸ್ ಪಕ್ಷವೇ ಮುಂದು
ಮತಗಟ್ಟೆ ಸಮೀಕ್ಷೆಗಳನ್ನು ಧೂಳೀಪಟ ಮಾಡುವ ರೀತಿ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿರುವುದು ಆರಂಭಿಕ ಟ್ರೆಂಡ್ಗಳಲ್ಲಿ ಕಂಡು ಬರುತ್ತಿದ್ದು, ಚುನಾವಣಾ ಆಯೋಗದ ಸದ್ಯದ ಮಾಹಿತಿಯ ಪ್ರಕಾರ ಬಿಜೆಪಿ ಹೆಚ್ಚು ಸ್ಥಾನ ಲೀಡ್ ಪಡೆದರೂ ಮತ ಗಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಮುಂದಿದೆ.
ಹೌದು , BJP- 39.04%, ಕಾಂಗ್ರೆಸ್ 40.44%, BSP 1.68%, AAP 1.57%, INLD 4.95%, JJP- 0.81%, CPK- 0.01%, CPI(M)- 0.32%, NCP- 0.00%, NCPSP- 0.05% ಮತ ಪಡೆದಿವೆ.