ಹರಿಯಾಣದಲ್ಲಿ ಇದ್ದಕ್ಕಿದ್ದಂತೆ ಟ್ರೆಂಡ್ ಬದಲಾಗಿದೆ. 65ಕ್ಕೆ ತಲುಪಿದ್ದ ಕಾಂಗ್ರೆಸ್ ಟ್ರೆಂಡ್ ದಿಢೀರ್ ಕುಸಿದಿದೆ. ಇದ್ದಕ್ಕಿದ್ದಂತೆ ಬಿಜೆಪಿ ಸ್ಥಾನಗಳು ವೇಗವಾಗಿ ಏರಿಕೆಯಾಗತೊಡಗಿವೆ.
ಹರಿಯಾಣದ ಫಲಿತಾಂಶ ಭಾರೀ ರೋಚಕತೆ ಸೃಷ್ಟಿಸುತ್ತಿದೆ. ಆರಂಭಿಕ ಹಿನ್ನಡೆ ಬಳಿಕ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಅಂಚೆ ಮತ ಎಣಿಕೆ ಬಳಿಕ ಇವಿಎಂ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 44 ಕ್ಷೇತ್ರಗಳಲ್ಲಿ ಲೀಡ್ ಕಾಯ್ದುಕೊಂಡಿದೆ.
ಕಾಂಗ್ರೆಸ್ ನಿಕಟ ಪೈಪೋಟಿ ಒಡ್ಡಿದ್ದು, 41 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಒಂದೆರಡು ಸುತ್ತಿನ ಮತ ಎಣಿಕೆ ಮಾತ್ರ ಪೂರ್ಣಗೊಂಡಿದ್ದು, ಮಧ್ಯಾಹ್ನದ ಒಳಗೆ ಸ್ಪಷ್ಟ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.