BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಸ್ಪರ್ಧಿಗಳು; ಇವರೇ ಮೊದಲ ಸ್ಪರ್ದಿ!

BIGG BOSS : ಕನ್ನಡದ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಓಪನಿಂಗ್​ ಇದೆ. ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು ಶೋ ಗ್ರ್ಯಾಂಡ್​ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದೆ. ಹೌದು, ನಿನ್ನೆ (ಶನಿವಾರ) ನಡೆದ…

Bigg Boss Kannada Season 11

BIGG BOSS : ಕನ್ನಡದ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಓಪನಿಂಗ್​ ಇದೆ. ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು ಶೋ ಗ್ರ್ಯಾಂಡ್​ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದೆ.

ಹೌದು, ನಿನ್ನೆ (ಶನಿವಾರ) ನಡೆದ ರಾಜಾರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಒಟ್ಟು 4 ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಮೊದಲ ಸ್ಪರ್ಧಿಯಾಗಿ ನಟಿ ಗೌತಮಿ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ ಮತ್ತು ಗೋಲ್ಡ್​ ಸುರೇಶ್ ದೊಡ್ಮನೆಗೆ ಆಗಮಿಸಿದ್ದಾರೆ.

BIGG BOSS ಸೀಸನ್-11.. ಇವರೇ ಮೊದಲ ಸ್ಪರ್ಧಿ

ಬಿಗ್‌ಬಾಸ್‌ ಕನ್ನಡ ಸೀಸನ್‌-11 ಇಂದಿನಿಂದ ಶುರುವಾಗಲಿದೆ. ದೊಡ್ಮನೆಗೆ ಹೋಗಲಿರುವವರ ಹೆಸರನ್ನು ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿಯೇ ರಿವೀಲ್‌ ಮಾಡಲಾಗಿದೆ. ಇದೀಗ ಸಿಕ್ಕಿರುವ ಮಾಹಿತಿಯಂತೆ ಈ ಸೀಸನ್‌ನ ಮೊಟ್ಟ ಮೊದಲ ಸ್ಪರ್ಧಿ ನಟಿ ಗೌತಮಿ ಜಾಧವ್‌.

Vijayaprabha Mobile App free

ಅದೇ ʻಸತ್ಯʼ ಧಾರಾವಾಹಿಯ ʻಸತ್ಯʼ..ಯಸ್‌ ಇವರೇ ಮೊದಲ ಕಂಟೆಸ್ಟೆಂಟ್‌. ಗೌತಮಿ ಸೀರಿಯಲ್‌ ಮಾತ್ರವಲ್ಲದೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರಿಗೆ ಮದುವೆನೂ ಆಗಿದೆ. ಕ್ಯಾಮರಾಮನ್‌ ಗಣೇಶ್‌ ಕಾಸರಗೋಡು ಈಕೆಯ ಪತಿ.

BIGG BOSS ಕನ್ನಡ 11ರ 2 ಮತ್ತು 3ನೇ ಸ್ಪರ್ಧಿ

ಬಿಗ್​ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿಗಳ 2ನೇ ಸ್ಪರ್ಧಿ ಲಾಯರ್ ಜಗದೀಶ್ ಇದೀಗ 3ನೇ ಸ್ಪರ್ಧಿಯ ಘೋಷಣೆ ಆಗಿದೆ. ಹಿಂದೂಪರ ಸಂಘಟನೆಗಳಲ್ಲಿ ಭಾಷಣಕಾರಳಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು 3ನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಳುಹಿಸಲಾಗುತ್ತಿದೆ.

ಲಾಯರ್ ಜಗದೀಶ್ ಅವ​ರದ್ದು ವರ್ಣಮಯ ವ್ಯಕ್ತಿತ್ವ. ವಕೀಲಿ ವೃತ್ತಿಗಿಂತಲೂ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಬ್ಯುಸಿಯಾಗಿರುತ್ತಾರೆ. ಇನ್ನು ಚೈತ್ರಾ ಹಿಂದೂಪರ ಸಂಘಟನೆ, ಹೋರಾಟಗಳಿಂದ ಚಿರಪರಿಚಿತರಾಗಿದ್ದಾರೆ.

BIGG BOSS: ಇವರೇ 4ನೇ ಸ್ಪರ್ಧಿ

ಬಿಗ್​ಬಾಸ್ ಕನ್ನಡ ಸೀಸನ್ 11ರ 4ನೇ ಸ್ಪರ್ಧಿಯಾಗಿ ಅಚ್ಚರಿಯ ಆಯ್ಕೆಯಾಗಿದೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿರುವ ಗೋಲ್ಡ್ ಸುರೇಶ್ ಎಂಬ ವ್ಯಕ್ತಿಯನ್ನು ದೊಡ್ಮನೆಗೆ ಕಳುಹಿಸಲಾಗಿದೆ.

ಹತ್ತನೇ ತರಗತಿವರೆಗಷ್ಟೇ ಓದಿರುವ ಸುರೇಶ್ ಈಗ ಭಾರೀ ಶ್ರೀಮಂತ ಎಂದು ಹೇಳಿಕೊಂಡಿದ್ದಾರೆ. ಇವರಿಗೆ ಮದುವೆಯಾಗಿದ್ದು, ಹೆಣ್ಣು ಮಗು ಇದೆ. ಕೆಲ ರಾಜಕಾರಣಿಗಳ ಜೊತೆಗೆ ಇನ್‌ಸ್ಟಾದಲ್ಲಿ ಫೋಟೋ, ವಿಡಿಯೋ ಹಾಕಿರುವ ಇವರು ಈ ಬಾರಿ ಅಚ್ಚರಿಯ ಘೋಷಣೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.