Davanagere Murder :ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ನಗರದ ನಿಟುವಳ್ಳಿ ರಸ್ತೆ ಕೆಟಿಜೆ ನಗರದಲ್ಲಿರುವ ಪ್ರಕಾಶ್ ಬಾರ್‌ನಲ್ಲಿ ನಡೆದಿದೆ.
ಹೌದು, ಬಾರ್‌ನಲ್ಲಿ ಸ್ನೇಹಿತರ ಜೊತೆ ಕುಳಿತಿದ್ದ ಕುಮಾರ್ ಎಂಬ ವ್ಯಕ್ತಿಗೆ ಹಿಂದಿನಿಂದ ಬಂದ ಗೌತಮ್ ಎಂಬ ವ್ಯಕ್ತಿಯಿಂದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು, ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯ
ಇನ್ನು, ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡಿದ ಕುಮಾರ್( 36) ಎಂಬ ವ್ಯಕ್ತಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆಟಿಜೆ ನಗರ ಪೊಲೀಸ್ ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಪೊಲೀಸ್ ಜೀಪ್‌ನಲ್ಲೇ ರವಾನೆ ಮಾಡಿದರು.
ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ವಾಹನದಲ್ಲಿ ಸಾವನ್ನಪ್ಪಿದ್ದಾನೆ. ಕೊಲೆಗೆ ಕಾರಣ ಮಾತ್ರ ನಿಗೂಢವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.