ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಈಗ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, “ಕೇಂದ್ರದ ತನಿಖಾ ಏಜೆನ್ಸಿಗಳಾದ CBI, IT ಮತ್ತು ED ಸಂವಿಧಾನದ ಕಾವಲು ನಾಯಿಗಳಾಗಿ ಉಳಿದಿಲ್ಲ. ಬದಲಿಗೆ BJP ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಎದುರಾಳಿ ಪಕ್ಷದವರ ಮೇಲೆ ದಾಳಿ ಮಾಡುವಂತೆ ಇವುಗಳಿಗೆ ತರಬೇತಿ ನೀಡಲಾಗಿದೆ.ಈ ಕೆಲಸವನ್ನು ಇವುಗಳು ಅಚ್ಚುಕಟ್ಟಾಗಿ ನಿರ್ವಹಿಸಿ BJPಗೆ ತಮ್ಮ ನಿಯತ್ತು ತೋರಿಸುತ್ತಿವೆ” ಎಂದು ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಮನೆಯ ಮೇಲೆ ನಡೆಸಿದ ಸಿಬಿಐ ದಾಳಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಕೇಂದ್ರದ ತನಿಖಾ ಏಜೆನ್ಸಿಗಳಾದ CBI,IT ಮತ್ತು ED ಸಂವಿಧಾನದ ಕಾವಲು ನಾಯಿಗಳಾಗಿ ಉಳಿದಿಲ್ಲ.
ಬದಲಿಗೆ BJP ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಎದುರಾಳಿ ಪಕ್ಷದವರ ಮೇಲೆ ದಾಳಿ ಮಾಡುವಂತೆ ಇವುಗಳಿಗೆ ತರಬೇತಿ ನೀಡಲಾಗಿದೆ.
ಈ ಕೆಲಸವನ್ನು ಇವುಗಳು ಅಚ್ಚುಕಟ್ಟಾಗಿ ನಿರ್ವಹಿಸಿ BJPಗೆ ತಮ್ಮ ನಿಯತ್ತು ತೋರಿಸುತ್ತಿವೆ pic.twitter.com/OwZQazwRR8— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 6, 2020