ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಟ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಅವರಿಗೆ ಜನ್ಮದಿನದ ಸಂಭ್ರಮ. ನಟ ದೃವ ಸರ್ಜಾ ಅವರು 6ನೇ ಅಕ್ಟೋಬರ್ 1984 ರಂದು ಜನಿಸಿದ್ದು ಕನ್ನಡದ ಚಿತ್ರರಂಗದ ಅತ್ಯುತ್ತಮ ನಾಯಕ ನಟರಲ್ಲಿ ಒಬ್ಬರು.
ದ್ರುವ ಸರ್ಜಾರವರು ಜೂನ್ 2012 ರಲ್ಲಿ ತೆರೆಕಂಡ ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶನದ ಅದ್ದೂರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದರು. ದೃವ ಸರ್ಜಾ ಅವರು ಅದ್ದೂರಿ, ಬಹಾದ್ದೂರ್ ಮತ್ತು ಭರ್ಜರಿ ಸೇರಿದಂತೆ ಕೇವಲ ಮಾಡಿದ್ದು 3 ಚಿತ್ರಗಳಾದರು 3 ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿ ಅದರದೇ ಅದ ಅಭಿಮಾನಿಗಳನ್ನು ಹೊಂದಿದ್ದಾರೆ.
ನಟ ಧ್ರುವ ಸರ್ಜಾರವರಿಗೆ ಅದ್ದೂರಿ ಸಿನಿಮಾದ ಅವರ ನಟನೆಗೆ ಉದಯ ಚಲನಚಿತ್ರ ಪ್ರಶಸ್ತಿ, ಸೈಮಾ ಪ್ರಶಸ್ತಿ ಹಾಗೂ ಸುವರ್ಣ ಪ್ರಶಸ್ತಿ ಲಭಿಸಿದೆ.
ದೃವ ಸರ್ಜಾ ಅವರ ಮುಂದಿನ ಬಹು ನಿರೀಕ್ಷಿತ “ಪೊಗರು” ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ದೃವ ಸರ್ಜಾಗೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಹುಟ್ಟುಹಬ್ಬದ ಸಂಭ್ರದಲ್ಲಿರುವ ದೃವ ಸರ್ಜಾ ಅವರಿಗೆ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ.
ಇದನ್ನು ಓದಿ: ಶೀಘ್ರದಲ್ಲೇ ಖ್ಯಾತ ಉದ್ಯಮಿಯನ್ನು ಮದುವೆಯಾಗಲಿರುವ ನಟಿ ಕಾಜಲ್ ಅಗರ್ವಾಲ್…?