ಮಗನನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಮೀನಾ ತೂಗುದೀಪ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 20 ದಿನ ಕಳೆದಿದೆ. ಈ 20 ದಿನಗಳಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಒಮ್ಮೆಯೂ ಮಗನನ್ನು ನೋಡಲು ಬಳ್ಳಾರಿ ಜೈಲಿಗೆ…

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 20 ದಿನ ಕಳೆದಿದೆ. ಈ 20 ದಿನಗಳಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಒಮ್ಮೆಯೂ ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಹೋಗಿರಲಲ್ಲ.

ಇದರಿಂದ ಬೇಸರಗೊಂಡಿದ್ದ ದರ್ಶನ್ ತಾಯಿಯನ್ನು ನೋಡಬೇಕು ಎಂದು ಹಂಬಲಿಸಿದ್ದರು. ಇದೀಗ ಮಗನನ್ನು ನೋಡಲು ತಾಯಿ ಮೀನಾ ತೂಗುದೀಪ ಮಗಳ ಜೊತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.  ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ನೋಡಲು ಮೀನಾ ಬಂದಿರಲಿಲ್ಲ. ಇದೀಗ ದರ್ಶನ್ ತಾಯಿ, ಸಹೋದರಿ ದಿವ್ಯಾ, ಬಾವ ಮಂಜುನಾಥ ಹಾಗೂ ಅಕ್ಕನ ಮಕ್ಕಳು ಆಗಮಿಸಿ ದರ್ಶನ್ ಕುಶಲೋಪರಿ ವಿಚಾರಿಸಿದ್ದಾರೆ. ಮಗನನ್ನು ಕಂಡೊಡನೆ ಮೀನಾ ಹಾಗೂ ಸಹೋದರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಸೆ.17ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಗೌಡ ಜೈಲಿಗೆ ಭೇಟಿ ನೀಡಿದ್ದರು. ಮನೆಯ ತಿನಸುಗಳು ಮತ್ತು ಹಣ್ಣುಗಳನ್ನು ನೀಡಿ ಕಾನೂನು ಸಮರ ಬಗ್ಗೆ ಚರ್ಚಿಸಿ ಹೋಗಿದ್ದಾರೆ.ಅಲ್ಲದೆ ಸದ್ಯದಲ್ಲೇ ದರ್ಶನ್ ರನ್ನು ಜೈಲಿನಿಂದ ಹೊರಗೆ ಕರೆ ತರುವುದಾಗಿ ಪತ್ನಿ ವಿಜಯಲಕ್ಷ್ಮಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.