ದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಏಮ್ಸ್‍ನ ವಿಧಿವಿಜ್ಞಾನ ತಂಡ ವರದಿ ನೀಡಿದ ಬೆನ್ನಲ್ಲೇ ಶಿವಸೇನೆ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು ಟೀಕೆ ವ್ಯಕ್ತಪಡಿಸಿದೆ.
ಜೀವನದಲ್ಲಿ ಸೃಷ್ಟಿಯಾದ ‘ವೈಫಲ್ಯಗಳನ್ನು ಸ್ವೀಕರಿಸಲು ಸಾಧ್ಯವಾಗದ ಚಾರಿತ್ರ್ಯವಿಲ್ಲದ ವ್ಯಕ್ತಿ’ ಎಂದು ದಿವಂಗತ ನಟನ ಬಗ್ಗೆ ಟೀಕೆ ವ್ಯಕ್ತಪಡಿಸಿದೆ. ಬಾಲಿವುಡ್ ನ ಹೆಸರಾಂತ ನಟ ಸುಶಾಂತ್ ಸಿಂಗ್ ರಜಪೂತ್ ನ ಸಾವಿನ ಬಗ್ಗೆ ಹಲವು ಅನುಮಾನುಗಳು ಸೃಷ್ಟಿಯಾಗಿದ್ದು, ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಮಾಧ್ಯಮಗಳಿಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಕೇಂದ್ರ ಬಿಂದುವಾಗಿತ್ತು. ಪ್ರಸ್ತುತ ಏಮ್ಸ್‍ನ ವಿಧಿವಿಜ್ಞಾನ ತಂಡ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ವರದಿ ನೀಡಿದೆ.
ಶಿವಸೇನೆಯ ಮುಖವಾಣಿಯಾದ ಸಾಮನಾದ ಸಂಪಾದಕೀಯದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಹಾರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಮತ್ತು ಬಿಹಾರ ಪೆÇಲೀಸರ ವಿರುದ್ಧ ರಾಜ್ಯ ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದೆ.