Munirathna bail : ಆರ್. ಆರ್. ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವುದು ಗೊತ್ತೇ ಇದೆ. ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ.
ಹೌದು, ನಿರ್ಮಾಪಕ ಹಾಗು ಶಾಸಕ ಮುನಿರತ್ನ ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ. ‘ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ತಿರುಪತಿಗೆ ಹೋಗುವಾಗ ಮುನಿರತ್ನರನ್ನು ಬಂಧಿಸಲಾಗಿದೆ ಎಂದು ನಿನ್ನೆ ಮುನಿರತ್ನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದಿಸಿದ್ದರು.
ಅದರೆ, ಮುನಿರತ್ನ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಆದೇಶವನ್ನು ನಾಳೆಗೆ ಕಾಯ್ದಿರಿಸಿದ್ದು, ಮತ್ತೆ ಮುನಿರತ್ನ ಅವರು ಜೈಲಿನಲ್ಲೇ ಇರುವಂತಾಗಿದೆ.
ಇದನ್ನು ಓದಿ: ಬಿಯರ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಅಕ್ಟೋಬರ್‌ನಿಂದ ಪರಿಷ್ಕೃತ ದರ ಜಾರಿ ಸಾಧ್ಯತೆ!