Beer price hike: ಈಗಾಗಲೇ ಒಂದು ವರ್ಷದಲ್ಲೇ 2 ಬಾರಿ ಮದ್ಯ ದರ (Alcohol price) ಏರಿಕೆ ಮಾಡಿ ಸರ್ಕಾರ ಶಾಕ್ ನೀಡಿತ್ತು. ಇದೀಗ ಮತ್ತೆ ಸರ್ಕಾರ ಬಿಯರ್ ಪ್ರಿಯರಿಗೆ ಶಾಕ್ ನೀಡಲು ಮುಂದಾಗಿದ್ದು, ಬಿಯರ್ ಬೆಲೆ ಏರಿಕೆ ಮಾಡುವ ಸಾಧ್ಯತೆಯಿದೆ.
ಹೌದು, ಈಗ ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸರ್ಕಾರ ಅಸ್ತು ಅಂದಿದ್ದು, ಅಕ್ಟೊಬರ್ 1 ರಿಂದ ಹೊಸ ದರಗಳು ಪರಿಷ್ಕರಣೆಗೊಳ್ಳುವ ಸಾಧ್ಯತೆಯಿದ್ದು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾಗಿದ್ದು, ಈ ಮಧ್ಯೆ ಸರ್ಕಾರ ಸುಂಕ ಹೆಚ್ಚಳ ಮಾಡಿದರೆ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಹೊಡೆತ ಬೀಳಲಿದೆ. ಇನ್ನು, 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು.
ಇದನ್ನೂ ಓದಿ: NPS vatsalya yojana ಗೆ ಇಂದು ಚಾಲನೆ; ಈ ಯೋಜನೆಯ ಪ್ರಯೋಜನ, ಅರ್ಹತಾ ಮಾನದಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ