ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ 2 ತಿಂಗಳ ಬಾಕಿಯ ಹಣವನ್ನು ಒಂದೇ ಬಾರಿಯ ಜಮಾವನ್ನು ಮಾಡಲಾಗುವುದು ಎಂದು ಮಹಿಳಾ & ಮಕ್ಕಳ ಅಭಿವೃದ್ಧಿಯ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲ. ಅದರೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಮಾಹಿತಿಯ ಪ್ರಕಾರ, ಬಾಕಿ ಉಳಿದಿರುವ ಎರಡು ತಿಂಗಳ ಹಣವು ಒಟ್ಟಿಗೆ ಜಮೆ ಆಗಲಿದೆ. ಗೃಹಿಣಿರಿಗೆ ಒಟ್ಟಿಗೆ 4000 ರೂಪಾಯಿ ನೇರ ವರ್ಗಾವಣೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಪಾವತಿಯನ್ನು ಮಾಡುವ ಗೃಹಲಕ್ಷ್ಮಿ ಯೋಜನೆ ಎಂದಿಗೂ ನಿಲ್ಲುವುದಿಲ್ಲ. ಇದು ನಿತ್ಯ, ನಿರಂತರವಾಗಿದೆ. ಬಾಕಿ ಇರುವ 2 ತಿಂಗಳ ಹಣವನ್ನು ಒಂದೇ ಬಾರಿಗೆ ಬ್ಯಾಂಕ್ ಖಾತೆಗೆ ಜಮಾವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದೆಯಷ್ಟೇ ಅರ್ಜಿಯ ಸಲ್ಲಿಕೆಗೆ ಅವಕಾಶವನ್ನು ನೀಡಿದ್ದು, ಅವರಿಗೂ ಸಹ ಒಟ್ಟಿಗೆ ಹಣವನ್ನು ಪಾವತಿಯಾಗಲಿದೆ. ಗೃಹಲಕ್ಷ್ಮಿ ಯೋಜನೆಯು ನಿರಂತರವಾಗಿದ್ದು, ಫಲಾನುಭವಿಗಳಿಗೆ 2 ತಿಂಗಳ ಬಾಕಿ ಇರುವ ಹಣ ಒಟ್ಟಿಗೆ ಪಾವತಿಸಲಾಗುವುದು ಎಂದು ಹೇಳಿದ್ದಾರೆ.