ಆನ್​ಲೈನ್​ ಗೇಮ್​ ಚಟಕ್ಕೆ ಬಿದ್ದ ತಮ್ಮ.. ಅಣ್ಣನ ಮದುವೆಗೆ ಇಟ್ಟಿದ್ದ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು : ಆನ್​ಲೈನ್ ರಮ್ಮಿ ಗೇಮ್​​ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದಿತ್ಯ ಬಂಧಿತ ಆರೋಪಿ. ಇದೇ…

ಬೆಂಗಳೂರು : ಆನ್​ಲೈನ್ ರಮ್ಮಿ ಗೇಮ್​​ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆದಿತ್ಯ ಬಂಧಿತ ಆರೋಪಿ. ಇದೇ ತಿಂಗಳ 15ಕ್ಕೆ ಅಣ್ಣನ ಮದುವೆ ಫಿಕ್ಸ್ ಆಗಿತ್ತು. ಇದಕ್ಕಾಗಿ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟಿದ್ದರು. ಆದರೆ ಅದನ್ನು ಆದಿತ್ಯ ಕದ್ದು ಸಿಕ್ಕಿಬಿದ್ದಿದ್ದಾನೆ.

ಊಬರ್ ಚಾಲಕನಾಗಿದ್ದ ಆದಿತ್ಯ ವಿಪರೀತ ಆನ್​ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಮನೆಯಲ್ಲಿದ್ದ ಎಲ್ಲರೂ ಮದುವೆ ಕಾರ್ಡ್ ಹಂಚಲು ಕೋಲಾರ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದ ತಮ್ಮ ಆದಿತ್ಯ ಆಂಧ್ರಪ್ರದೇಶಕ್ಕೆ ಟ್ರೈನ್​​ ಹತ್ತಿದ್ದಾನೆ. ಇತ್ತ ಮನೆಗೆ ಬಂದ ಅಣ್ಣನಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಹಣ ಕಣ್ಮರೆಯಾಗಿರೋದನ್ನು ಕಂಡು ಅನುಮಾನ ಬಂದಿದೆ. ಕೊನೆಗೆ ಪೋಷಕರು ಆದಿತ್ಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕೂಡಲೇ ಟವರ್ ಡಂಪ್ ಲೊಕೇಷನ್ ಆಧರಿಸಿ ಆರೋಪಿ ಬಂಧಿಸಿದ್ದಾರೆ.

Vijayaprabha Mobile App free

ಪ್ರಕರಣ ದಾಖಲಾದ 5 ಗಂಟೆಗಳಲ್ಲೇ ಆರೋಪಿ ಆದಿತ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಲಕ್ಷ ಬೆಲೆ ಬಾಳುವ 100 ಗ್ರಾಂ ಬೆಳ್ಳಿ 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.