ಸ್ಯಾಂಡಲ್​ವುಡ್ ನ ತ್ಯಾಗರಾಜ ರಮೇಶ್ ಅರವಿಂದ್ ಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಚಿತ್ರರಂಗದ ಬಹುಭಾಷಾ ಪ್ರತಿಭಾನ್ವಿತ ಸಜ್ಜನ ನಟ ರಮೇಶ್ ಅರವಿಂದ್‍ಗೆ ಇಂದು ಜನುಮ ದಿನದ ಸಂಭ್ರಮ. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ನಟ…

ಭಾರತೀಯ ಚಿತ್ರರಂಗದ ಬಹುಭಾಷಾ ಪ್ರತಿಭಾನ್ವಿತ ಸಜ್ಜನ ನಟ ರಮೇಶ್ ಅರವಿಂದ್‍ಗೆ ಇಂದು ಜನುಮ ದಿನದ ಸಂಭ್ರಮ. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ನಟ ರಮೇಶ್​ ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್​ ಇಂದು 56ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದು, ಅವರಿಗೆ ಅಭಿನಂದನಗಳ ಮಹಾಪೂರ ಹರಿದು ಬಂದಿದೆ. ರಮೇಶ್ ಅರವಿಂದ್ ಒಬ್ಬ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೊದರೆ ಅವರ ಬಹುಮುಖ ಪ್ರತಿಭೆ ಅನಾವರಣಗೊಳ್ಳುತ್ತಾ ಹೊಗುತ್ತದೆ. ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಕಾರ್ಯಕ್ರಮಗಳು ಪ್ರೀತಿಯಿಂದ ರಮೇಶ್, ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮಗಳು ಕನ್ನಡಿಗರ ಹೃದಯ ಗೆದ್ದಿವೆ. ಇವರ ಮಾತಿನ ಶೈಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.

ರಮೇಶ್ ಕೆ. ಬಾಲಚಂದರ್ ರವರ ಗರಡಿಯಲ್ಲಿ ಬೆಳೆದ ಪ್ರತಿಭೆ, ಸುಂದರ ಸ್ವಪ್ನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಇವರು ಇಲ್ಲಿಯವರೆಗೂ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ ಮಲಯಾಳಂ, ಚಿತ್ರಗಳಲ್ಲೂ ನಟಿಸಿ ಸಹಿ ಎನಿಸಿಕೊಂಡಿದ್ದಾರೆ.

ರಮೇಶ್ ಅವರು ಇಂಜಿನಿಯರಿಂಗ್​ ಕಲಿತಿದ್ದರೂ ಇವರನ್ನು ಹೆಚ್ಚಾಗಿ ಕಾಡಿದ್ದ ಸಿನಿಮಾ, ರಂಗಭೂಮಿ. ಅತ್ಯಂತ ಚತುರ, ವಾಕ್ಚತುರ್ಯ ಹೊಂದಿರಿವ ರಮೇಶ್​ ಮಾತಿಗೆ ಸೋಲಿಲ್ಲದವರಿಲ್ಲ. ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಅನುರಾಗ ಸಂಗಮ, ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿರುವ ರಮೇಶ್ ಅರವಿಂದ್ ತ್ಯಾಗರಾಜನೆಂದೆ ಖ್ಯಾತಿ ಪಡೆದಿದ್ದಾರೆ.

Vijayaprabha Mobile App free

ಸ್ವತ: ಇವರೇ ನಿರ್ದೇಶನದ ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ವೆಂಕಟ್ ಇನ್ ಸಂಕಟ್ ಚಿತ್ರಗಳು ಅತ್ಯತ್ತಮವಾಗಿ ಮೂಡಿಬಂದಿವೆ. ಚಿತ್ರಗಳಿಗೆ ಕಥೆ ಬರೆಯುವ ಮೂಲಕ ಕಥೆಗಾರನಾಗಿಯೂ ರಮೇಶ್ ಹೆಸರು ಮಾಡಿದ್ದಾರೆ. ಇವರ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ರಮೇಶ್ ಅರವಿಂದ್ ಪತ್ನಿ ಶ್ರೀಮತಿ ಅರ್ಚನಾ, ಮಗಳು ನಿಹಾರಿಕಾ ಮಗ ಅರ್ಜುನ್. ಸದಾ ಲವಲವಿಕೆಯಿಂದ ಇರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಸರಳ ಸಜ್ಜನ ನಟ ಎಂದರೆ ತಪ್ಪಾಗಲಾರದು. ರಮೇಶ್ ಅರವಿಂದ್‍ರವರು ಮತ್ತಷ್ಟು ಚಿತ್ರರಂಗದಲ್ಲಿ ಹೆಸರು ಮಾಡಲಿ. ಅವರ ಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ ಎಂದು ಈ ಮೂಲಕ ಹಾರೈಸುತ್ತೇನೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.