ನಟ ದರ್ಶನ್‌ ಜೈಲಿನಿಂದ ಹೊರಬರಲು ಇದೆಯಂತೆ ಒಂದು ಮಾರ್ಗ; ಯಾವುದು ಆ ಮಾರ್ಗ!?

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್‌ (Actor Darshan) ಜೈಲು ಸೇರಿದ್ದಾರೆ. ಚಾರ್ಜ್‌ ಶೀಟ್‌ನಲ್ಲಿ (charge sheet) ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ದರ್ಶನ್‌ ಮತ್ತು ಸಂಗಡಿಗರಿಗೆ ಜೈಲು…

Actor Darshan vijayaprabhanews

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್‌ (Actor Darshan) ಜೈಲು ಸೇರಿದ್ದಾರೆ. ಚಾರ್ಜ್‌ ಶೀಟ್‌ನಲ್ಲಿ (charge sheet) ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ದರ್ಶನ್‌ ಮತ್ತು ಸಂಗಡಿಗರಿಗೆ ಜೈಲು ಶಿಕ್ಷೆ ಖಾಯಂ ಆಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ.

ಈ ಮಧ್ಯೆ ನಟನನ್ನೇ ನಂಬಿ ದುಡ್ಡು ಸುರಿದ ಸಿನಿಮಾ ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದೆ. ಆದ್ರೆ, ದರ್ಶನ್ ಜೈಲಿಂದ ಹೊರಬರಲು ಒಂದು ಮಾರ್ಗ ಇದೆ. ಹೌದು, ದರ್ಶನ್ ಪೆರೋಲ್ ಪಡೆದು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬಹುದಾಗಿದೆ. ಆದರೆ ಇದಕ್ಕೆಲ್ಲಾ ನ್ಯಾಯಾಲಯ ಅನುವು ಮಾಡಿಕೊಡಬೇಕಾಗಿದೆ.

ದರ್ಶನ್‌ ಬಿಡುಗಡೆಗೆ `ಈ ಒಂದು’ ಅವಕಾಶ ಸಾಕು!

ಈ ಹಿಂದೆ TADA ಕೇಸ್​ನಲ್ಲಿ ನಟ ಸಂಜಯ್​ ದತ್​ಗೆ ಶಿಕ್ಷೆಯಾದ ಸಂದರ್ಭದಲ್ಲಿ ಅವರಿಗೂ ಇದೇ ಸಂಕಷ್ಟ ಎದುರಾಗಿತ್ತು. ಕಾಲ್​ಶೀಟ್​ ಪ್ರಕಾರ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ಕೋರ್ಟ್​ ಸಂಜಯ್​ ದತ್​ಗೆ 164 ದಿನಗಳ ಕಾಲ ಪೆರೋಲ್​ ನೀಡಿತ್ತು.

Vijayaprabha Mobile App free

ಪೆರೋಲ್​ ಮೇಲೆ ಬಿಡುಗಡೆಯಾಗಿದ್ದ ನಟ ಸಂಜಯ್​ ದತ್​ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ನಿರ್ಮಾಪಕರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಇದೀಗ ದರ್ಶನ್​ಗೂ ಇದೇ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

https://vijayaprabha.com/heavy-rain-in-these-districts-till-september-10/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.