ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿಯ ‘ಹತ್ಯಾಚಾರ’ದ ಪ್ರಕರಣದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದೆ ಸ್ಯಾಂಡಲ್ ವುಡ್ ಕ್ವೀನ್, ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ರೇಪ್ ಘಟನೆಯ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಯುಪಿಯ ಹತ್ರಾಸ್ನಲ್ಲಿ ದಲಿತ ಮಹಿಳೆಯನ್ನು 4 ಮೇಲ್ಜಾತಿಯ ಪುರುಷರು ಕ್ರೂರವಾಗಿ ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಕೆಲವು ದಿನಗಳ ನಂತರ ನಿಧನರಾದರು. ಆಕೆಯ ದೇಹವನ್ನು ಮನೆಗೆ ಕೊಂಡೊಯ್ಯಲು ಕುಟುಂಬಕ್ಕೆ ಅನುಮತಿ ನಿರಾಕರಿಸಿ, ಪೊಲೀಸರು ಕುಟುಂಬದ ಅನುಮತಿಯಿಲ್ಲದೆ ಶವ ಸಂಸ್ಕಾರ ಮಾಡಿದ್ದಾರೆ.
ಸಂತ್ರಸ್ತೆ ಕುಟುಂಬಸ್ಥರನ್ನು ಈಗ ಲಾಕ್ ಮಾಡಿ ಮತ್ತು ಅವರ ಫೋನ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಮಾಧ್ಯಮಗಳಿಗೆ ಅಥವಾ ಯಾವುದೇ ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡಿಲ್ಲ. ಸಂತ್ರಸ್ತೆಯ ಮನೆ, ಗ್ರಾಮ ಪ್ರವೇಶ ಮತ್ತು ಹೆದ್ದಾರಿಗೆ ಪ್ರವೇಶಿಸಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸಿದ ನಾಯಕರನ್ನು ಬಂಧಿಸಿ, ಥಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅ ಕುಟುಂಬ ಏನು ತಪ್ಪು ಮಾಡಿದೆ? ತಮ್ಮ ಮಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ಅವರು ಯಾಕೆ ಕಿರುಕುಳಕ್ಕೊಳಗಾಗುತ್ತಿದ್ದಾರೆ? ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಯುಪಿ ಸರ್ಕಾರ ಯಾವ ನಿಯಮ ಪುಸ್ತಕವನ್ನು ಅನುಸರಿಸುತ್ತಿದೆ? ಮೋದಿಯವರು ಈ ವೈಫಲ್ಯವನ್ನು ಮುಚ್ಚಿಹಾಕಲು ಯಾವ ನಿಯಮವನ್ನು ಅನುಸರಿಸುತ್ತಿದ್ದಾರೆ?
ಇವೆಲ್ಲವನ್ನೂ ಮುಚ್ಚಿಹಾಕಲು ಪೊಲೀಸರು ದಲಿತ ಯುವತಿಯ ಮೇಲೆ ಅತ್ಯಾಚಾರವನ್ನು ನಿರಾಕರಿದ್ದಾರೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಶವಸಂಸ್ಕಾರದ ವಿಡಿಯೋಗಳು, ಶವವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಕುಟುಂಬದವರು ಮನವಿ ಮಾಡಿದ ವಿಡಿಯೋಗಳು ಮತ್ತು ಸಂತ್ರಸ್ತೆ ಕುಟುಂಬದವರ ಮನೆಯನ್ನು ಬೀಗ ಹಾಕಿರುವ ವಿಡಿಯೋಗಳಿವೆ. ಇದು ನಿಮಗೆ ಪ್ರಜಾಪ್ರಭುತ್ವದಂತೆ ಭಾಸವಾಗಿದೆಯೇ? ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿ ನಮ್ಮ ಪೂರ್ವಜರು ಮತ್ತು ನಮಗಾಗಿ ಕಲ್ಪಿಸಿಕೊಟ್ಟ ದೇಶ ಇದಲ್ಲ.
ನಮ್ಮ ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಂಸದೆ ರಮ್ಯಾ ಅವರು ತಮ್ಮಇನ್ಸ್ಟಾಗ್ರಾಮ್ನಲ್ಲಿ ಯುಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.