ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಟಿವಿ ಭಾಗ್ಯ ಸಿಕ್ಕಿದೆ.ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ. ಮೂರನೇ ಬಾರಿಗೆ ದರ್ಶನ್ ಅವರ ಬೇಡಿಕೆಯನ್ನು ಜೈಲಧಿಕಾರಿಗಳು ಈಡೇರಿಕೆ ಮಾಡಿದ್ದಾರೆ.
ಕೊನೆಗೂ ದರ್ಶನ್ ಸೆಲ್‌ಗೆ ಟಿವಿ ಬಂದಿದೆ ಎನ್ನಲಾಗಿದೆ. ಕಳೆದ ಐದು ದಿನಗಳ ಹಿಂದೆ ಟಿವಿಗಾಗಿ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ನಂತರ ಇಂದು ಬೆಳಗ್ಗೆ ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ.
ಕಳೆದ ಮಂಗಳವಾರ ಟಿವಿ ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ. ಇಂದು ದರ್ಶನ್ ಇರುವ ಸೆಲ್‌ಗೆ ಟಿವಿ ನೀಡಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.