‘ಅನ್ನಭಾಗ್ಯ ಯೋಜನೆ ಅಡಿ 5k.g ಅಕ್ಕಿಯ ಹಣ ನೀಡುವ ಯೋಜನೆ ಮುಂದುವರೆಸಲು ನಿರ್ಧಾರ’: ಸಿಎಂ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಹೊರತಾಗಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆಯಂತಹ ಫುಡ್ ಕಿಟ್ ವಿತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಕೈ ಬೀಡಲಾಗಿದೆ. ಹೌದು, ಅನ್ನ ಭಾಗ್ಯ (annabhagya) ಯೋಜನೆಯಡಿ…

Annabhagya Yojane vijayaprabhanews

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಹೊರತಾಗಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆಯಂತಹ ಫುಡ್ ಕಿಟ್ ವಿತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಕೈ ಬೀಡಲಾಗಿದೆ.

ಹೌದು, ಅನ್ನ ಭಾಗ್ಯ (annabhagya) ಯೋಜನೆಯಡಿ ಐದು ಕೆಜಿ ಅಕ್ಕಿಯೊಂದಿಗೆ ಆಹಾರ ಕಿಟ್ ವಿತರಿಸುವ ಪ್ರಸ್ತಾವನೆ ಕೈ ಬಿಟ್ಟು ಪ್ರತಿಯೊಬ್ಬ ಸದಸ್ಯರಿಗೆ ನೀಡುತ್ತಿದ್ದ 170 ರೂ. ನೇರ ನಗದು ವರ್ಗಾವಣೆ ಮುಂದುವರಿಸಲು ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಮೊತ್ತವನ್ನು ಖಾತೆಗೆ ಜಮಾ ಮಾಡಲು ತೀರ್ಮಾನಿಸಲಾಗಿದೆ.

ಅನ್ನ ಭಾಗ್ಯ (annabhagya)  ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಬಳಿಕ ಕೇಂದ್ರ ಸರ್ಕಾರ ಹಣ ನೀಡಿದರೂ ಅಕ್ಕಿ ಕೊಡದ ಕಾರಣ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಇತ್ತೀಚೆಗೆ 170 ರೂ. ಬದಲಿಗೆ ಅಡುಗೆ ಎಣ್ಣೆ, ಸಕ್ಕರೆ, ಬೇಳೆಯಂತಹ ಆಹಾರ ಕಿಟ್ ನೀಡುವ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಕೈ ಬಿಟ್ಟು 170 ರೂ. ನೀಡುವುದನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ.

Vijayaprabha Mobile App free

ತಿಂಗಳಿಗೆ ಒಬ್ಬರಿಗೆ 5 ಕೆಜಿ ಅಕ್ಕಿ ಸಾಕಾಗುತ್ತದೆ ಉಳಿದ ಹಣದಲ್ಲಿ ಅವರು ಬೇರೆ ಧಾನ್ಯ, ಬೇಳೆ, ಅಡುಗೆ ಎಣ್ಣೆ ಖರೀದಿಸಬಹುದು. ಹೀಗಾಗಿ ಆಯ್ಕೆಯನ್ನು ಮುಕ್ತವಾಗಿಯೇ ಮುಂದುವರಿಸಲಾಗಿದೆ ಎಂದು ಸಚಿವ ಹೆಚ್. ಕೆ ಪಾಟೀಲ್ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.