ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ; ಚಾರ್ಜ್ ಶೀಟ್ ನಲ್ಲಿ ಭಯಾನಕ ಅಂಶಗಳು ಬಯಲು..!

Charge sheet: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ವಿರುದ್ಧ ಪೊಲೀಸರು ಕೋರ್ಟ್‌ಗೆ 4,500ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ (Charge sheet) ಸಲ್ಲಿಕೆ ಮಾಡಿದ್ದು, ದರ್ಶನ್ ಅವರನ್ನು 2ನೇ ಆರೋಪಿ…

Charge sheet submission against D gang

Charge sheet: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ವಿರುದ್ಧ ಪೊಲೀಸರು ಕೋರ್ಟ್‌ಗೆ 4,500ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ (Charge sheet) ಸಲ್ಲಿಕೆ ಮಾಡಿದ್ದು, ದರ್ಶನ್ ಅವರನ್ನು 2ನೇ ಆರೋಪಿ ಎಂದೇ ದಾಖಲಿಸಲಾಗಿದ್ದು, ಪವಿತ್ರಾ 1ನೇ ಆರೋಪಿಯಾಗಿದ್ದಾರೆಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಹೌದು, 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, 3 ಪ್ರತ್ಯಕ್ಷ ಸಾಕ್ಷಿಗಳು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿರುವುದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿಸಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಭಯಾನಕ ಅಂಶಗಳು ಬಯಲು..!

ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಭಾಗಿಯಾದ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಂತ್ರ ಮುಚ್ಚಿ ಹಾಕಲು ಹಣ ನೀಡಿದ್ದು ದರ್ಶನ್ ಅನ್ನೋದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಆಗಿದೆ.

Vijayaprabha Mobile App free

ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿದೆ. ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ ಬಗ್ಗೆ ಖಚಿತ ಮಾಹಿತಿ ಸಿಕ್ಕಂತೆ ಆಗಿದೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದಕ್ಕೆ ಸಾಕ್ಷಿ ಸಿಕ್ಕಿದೆ.

ಪೊಲೀಸ್​​ ಇಲಾಖೆ ದರ್ಶನ್ ವಿರುದ್ಧದ ಚಾರ್ಜ್​ಶೀಟ್​ಗಾಗಿ ಖರ್ಚು ಮಾಡಿದೆಷ್ಟು ಗೊತ್ತಾ?

ಇತ್ತೀಚಿಗಷ್ಟೆ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದರು. ಇದೀಗ ಅವರ ಮೇಲೆ ಚಾರ್ಜ್​ಶೀಟ್ ಹಾಕಲಾಗಿದೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್​ನ ಚಾರ್ಜ್​ಶೀಟ್​ ಬಹಳ ದುಬಾರಿ ಎನಿಸಿಕೊಂಡಿದೆ. ಹೌದು ಈ ಪ್ರಕರಣದ ತನಿಖೆಗೆ ಪೊಲೀಸ್​ ಇಲಾಖೆಯು ಬರೊಬ್ಬರಿ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಪ್ರಕರಣದ ಬಗ್ಗೆ 22 ಬಂಡಲ್ ಚಾರ್ಚ್ ಶೀಟ್ ಸಲ್ಲಿಕೆ ಯಾಗಿದೆ ಎನ್ನಲಾಗುತ್ತಿದೆ.ಒಟ್ಟಾರೆ 90 ಸಾವಿರ ಪುಟಗಳ ಚಾರ್ಜ್‌ ಶೀಟ್‌ಗಾಗಿ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್; ಎ1 ಆರೋಪಿಯಾಗಿ ಪವಿತ್ರ ಗೌಡ

ರೇಣುಕಾಸ್ವಾಮಿ ಕೊಲೆ ಪ್ರಕರಣದ FIR ನಲ್ಲಿ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಆಗಿದ್ದರು. ಅನೇಕರು ಇದು ಬದಲಾಗಬಹುದೆಂದು ಭಾವಿಸಿದ್ದರು. ಆದರೆ ಚಾರ್ಜ್‌ ಶೀಟ್‌ ನಲ್ಲಿಯೂ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಎಂದೇ ದಾಖಲಿಸಿದ್ದಾರೆ.

ಎಸಿಪಿ ಚಂದನ್​​ ಕುಮಾರ್ ಹಾಗೂ ತನಿಖಾ ತಂಡ ಈ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಕೊಲೆ ಮಾಡಲು ಮೂಲ ಕಾರಣ ಪವಿತ್ರಾ ಗೌಡ. ಹೀಗಾಗಿ, ಅವರು ಎ1 ಆಗಿದ್ದಾರೆ. ಹಲ್ಲೆ ನಡೆಯುವ ಸ್ಥಳದಲ್ಲಿ ಅವರು ಹಾಜರಿದ್ದರು ಎಂದು ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್; ಚಾರ್ಜ್ ಶೀಟ್ ಸಲ್ಲಿಕೆ ನಂತರ ಮುಂದೇನು..?

ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಸಲಾಗಿದೆ. ನಂತರ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸ್ಕ್ರೂಟಿನಿ ಆಗುತ್ತದೆ. ಬಳಿಕ ನ್ಯಾಯಾಧೀಶರು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ಸಹಿ ಮಾಡುತ್ತಾರೆ. ನಂತರ ಚಾರ್ಜ್ ಶೀಟ್ ನ ಮಾಹಿತಿಯನ್ನು ಆರೋಪಿಗಳಿಗೆ ಕೊಡಲಾಗುತ್ತದೆ.

https://vijayaprabha.com/sadhguru-jaggi-vasudev-biography/

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.