Mobile phone: ಮೊಬೈಲ್ ಫೋನ್ ಬಳಕೆ ಮಾನವನ ಆರೋಗ್ಯಕ್ಕೆ ಅಪಾಯಕಾರಿಯೇ ಎಂದು ತನಿಖೆ ಮಾಡಲು ಪ್ರಯತ್ನಿಸಲು ಹಲವಾರು ರೀತಿಯ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಆದರೆ, ಇಲ್ಲಿಯವರೆಗಿನ ಪುರಾವೆಗಳು ಸೆಲ್ ಫೋನ್ ಬಳಕೆ ಮಾನವರಲ್ಲಿ ಮೆದುಳು ಅಥವಾ ಇತರ ರೀತಿಯ ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ ಎಂದು ತಿಳಿಸಿವೆ.
ಹೌದು, ಮೊಬೈಲ್ ಫೋನ್ ಬಳಕೆಗೂ, ಮೆದುಳಿನ ಕ್ಯಾನ್ಸರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಧ್ಯಯನ ಬಹಿರಂಗಪಡಿಸಿದೆ.
ವಿಶ್ವದಲ್ಲಿ ವೈರ್‌ಲೆಸ್ ತಂತ್ರಜ್ಞಾನ ಗಣನೀಯವಾಗಿ ಹೆಚ್ಚಿದ್ದರೂ ಮಿದುಳಿನ ಕ್ಯಾನ್ಸರ್ ಹೆಚ್ಚಳ ಆ ಮಟ್ಟದಲ್ಲಿ ಆಗಿಲ್ಲ. ದಶಕಕ್ಕೂ ಹೆಚ್ಚು ಕಾಲ ಫೋನ್‌ನಲ್ಲಿ ಮಾತನಾಡುವ ಮತ್ತು ಮೊಬೈಲ್ ಬಳಸುವ ಎಲ್ಲರಿಗೂ ಇದು ಅನ್ವಯಿಸುತ್ತದೆ ಎಂದು ಹೇಳಲಾಗುತ್ತದೆ. ಹನ್ನೊಂದು ಸಂಶೋಧಕರು 1994 ರಿಂದ 2022 ರವರೆಗಿನ 63 ಅಧ್ಯಯನಗಳನ್ನು ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
https://vijayaprabha.com/heavy-rains-in-these-districts-of-karnataka/