Yettinahole Project: ಎತ್ತಿನಹೊಳೆ ಯೋಜನೆ ಕರ್ನಾಟಕದ 7 ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಮೊದಲ ಹಂತದ ಕಾಮಗಾರಿಗಳನ್ನು ಸೆಪ್ಟೆಂಬರ್ 6, 2024 ರಂದು ಉದ್ಘಾಟಿಸಲಾಗುವುದು.
ಈ ಯೋಜನೆಯು 2027 ರಲ್ಲಿ ಪೂರ್ಣಗೊಳ್ಳಲಿದೆ. ಪ್ರಸ್ತುತ, ಪಂಪ್ ಮಾಡಿದ ನೀರನ್ನು 132 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ. ಮುಂದಿನ ಹಂತದಲ್ಲಿ, ಅರಣ್ಯ ಭೂಮಿ ತಕರಾರು ಬಗೆಹರಿಸಿ, 140 ಕಿ.ಮೀ ದೂರದ ತುಮಕೂರಿಗೆ ನೀರು ಹರಿಸಲಾಗುವುದು.
ಗೌರಿ ಹಬ್ಬದಂದು ಎತ್ತಿನಹೊಳೆ ಕಾಮಗಾರಿ ಉದ್ಘಾಟನೆ
ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಸೆ.6 ಗೌರಿ ಹಬ್ಬದಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ತಿಳಿಸಿದ್ದಾರೆ. ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳು ಈ ಯೋಜನೆಯನ್ನು ಎದುರುನೋಡುತ್ತಿವೆ.
ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸಲು 12,702 ಎಕರೆ ಭೂಮಿ
ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸಲು ಬರೋಬ್ಬರಿ 12,702 ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಬೈರಗೊಂಡ್ಲು ಜಲಾಶಯಕ್ಕೆ 5,478.68 ಎಕರೆ ಭೂಮಿ, ಮುಖ್ಯ ನಾಲೆಗೆ 5,575 ಎಕರೆ, ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ574.3 ಎಕರೆ, ರಾಮನಗರ ಫೀಡರ್, ಮಧುಗಿರಿ ಫೀಡರ್, ಗೌರಿಬಿದನೂರು ಫೀಡರ್, ಶ್ರೀನಿವಾಸಪುರ ಫೀಡರ್, ಕೋಲಾರ ಫೀಡರ್‌ಗಳಿಗೆ ಕ್ರಮವಾಗಿ 127.24, 234.24,155, 306, 252 ಎಕರೆ ಭೂಮಿ ಸೇರಿದಂತೆ ಒಟ್ಟು 12,702.46 ಎಕರೆ ಭೂಮಿಯಿಂದ ಎತ್ತಿನೊಳೆ ಕಾಮಗಾರಿ ಪೂರ್ಣಗೊಂಡಿದೆ.
ಎತ್ತಿನಹೊಳೆ ಯೋಜನೆಗೆ ಈವರೆಗೆ ಎಷ್ಟು ಖರ್ಚಾಗಿದೆ?
ಎತ್ತಿನಹೊಳೆ ಯೋಜನೆಗೆ ಇದುವರೆಗೂ 11500 ಕೋಟಿ ರೂ.ಗಳು ವೆಚ್ಚವಾಗಿದ್ದು, ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ 12500 ಕೋಟಿ ರೂ.ಗಳ ಅವಶ್ಯಕತೆ ಇರುತ್ತದೆ. ಯೋಜನಾ ವಿನ್ಯಾಸ ಹಲವು ಬಾರಿ ಮಾರ್ಪಡಿಸಲಾಗಿದೆ ಮತ್ತು ಯೋಜನೆ ಉದ್ದೇಶ ವಿಸ್ತರಿಸಲಾಗಿದೆ.
ಆದ್ದರಿಂದ ಮೂಲ ಉದ್ದೇಶಕ್ಕೆ ಧಕ್ಕೆ ಇಲ್ಲದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಅಶೋತ್ತರಗಳನ್ನು ಸಫಲಗೊಳಿಸಲು ಪ್ರತಿ ವರ್ಷ ಈ ಯೋಜನೆಗೆ 3 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿಸಲಾಗುತ್ತದೆ.
ಎತ್ತಿನಹೊಳೆ ಯೋಜನೆಯ ಪ್ರತಿಕೂಲ ಪರಿಣಾಮಗಳು ಏನೇನು?
ಮಲೆನಾಡಿನ ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ, ನೀರಿನ ಸೌಲಭ್ಯವಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವಿಲ್ಲ ಹೀಗೆ ಹತ್ತಾರು ಸಮಸ್ಯೆಗಳಿರುವುದರಿಂದ ತಮ್ಮ ಜಮೀನಿಗೆ ಸೂಕ್ತ ಬೆಲೆ ನೀಡಿದರೆ ಮಲೆನಾಡು ತೊರೆದು ಹೊರ ಹೋಗಲು ತಯಾರಾಗಿರುವ ಒಂದು ವರ್ಗವಿದ್ದರೆ, ನದಿ ತಿರುವು ಯೋಜನೆಯನ್ನು ವಿರೋಧಿಸುವ ಇನ್ನೊಂದು ವರ್ಗವೂ ಪ್ರತಿಭಟನೆಗೆ ಸಜ್ಜಾಗಿದೆ. ಈ ಯೋಜನೆಯಿಂದಾಗಿ ಇಲ್ಲಿನ ಕೃಷಿಕರ ಜಮೀನಿಗೆ ಉತ್ತಮ ಪರಿಹಾರ ನೀಡಿದರೆ ಊರನ್ನೇ ಬಿಟ್ಟು ಹೋಗಲು ಸಜ್ಜಾಗಿದ್ದಾರೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಮಾಹಿತಿ
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕರ್ನಾಟಕದ ಪ್ರಮುಖ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
ಎತ್ತಿನಹೊಳೆ ಯೋಜನೆಯಿಂದ ಭೂಸಂತ್ರಸ್ತರಿಗೆ ಭಾರಿ ಗೋಳು..!
ಎತ್ತಿನಹೊಳೆ ಕಾಮಗಾರಿಯಿಂದ ಸಾಕಷ್ಟು ರೈತರಿಗೆ ತೊಂದರೆಯಾಗಿದೆ. ಜಮೀನನ್ನು ರೈತರು ಮಾರಾಟ ಮಾಡುವ ಹಾಗೂ ಇಲ್ಲ. ತಮ್ಮ ಜಮೀನುಗಳ ಶಾಶ್ವತ ಅಭಿವೃದ್ಧಿಗೆ ಬಂಡವಾಳವನ್ನೂ ಹಾಕುವಂತಿಲ್ಲ. ಬೆಳೆಗಳನ್ನು ಬೆಳೆಯುವಂತಿಲ್ಲ.
ಇರುವ ಬೆಳೆಗಳನ್ನು ಉಳಿಸಿಕೊಳ್ಳೋಣ ಅಂದರೆ ಇಂದೋ, ನಾಳೆಯೋ ಯೋಜನೆಯ ಪಾಲಾಗಿಬಿಡಲಿವೆ ಏನು ಮಾಡುವುದು ಎಂಬ ಯೋಚನೆ, ಚಿಂತೆಗಳಲ್ಲೇ ತಾಲೂಕಿನ ಭೂ ಸಂತ್ರಸ್ಥರು ತಮ್ಮ ಜಮೀನುಗಳನ್ನು ಹಾಳುಬಿಟ್ಟು ಇತ್ತ ಬೆಲೆಯೂ ಇಲ್ಲ, ಅತ್ತ ಪರಿಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
https://vijayaprabha.com/goodbye-actor-darshan-to-the-cinema-field/