ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ: ಅಪೌಷ್ಟಿಕತೆಯಿಂದ ವಿಶ್ವದಾದ್ಯಂತ ಪ್ರತಿವರ್ಷ 1.10 ಕೋಟಿ ಮಂದಿ ಸಾವು

National Nutrition Week: ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ದಕ್ಷಿಣ ಏಷ್ಯದಲ್ಲಿ ಅತಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ತಪಡುತ್ತಿದ್ದಾರೆ. ಜಗತ್ತಿನಾದ್ಯಂತ ಸುಮಾರು 795 ದಶಲಕ್ಷ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿವರ್ಷ ಸೆಪ್ಟೆಂಬರ್‌ 1ರಿಂದ…

National Nutrition Week: ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ದಕ್ಷಿಣ ಏಷ್ಯದಲ್ಲಿ ಅತಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ತಪಡುತ್ತಿದ್ದಾರೆ. ಜಗತ್ತಿನಾದ್ಯಂತ ಸುಮಾರು 795 ದಶಲಕ್ಷ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಹೀಗಾಗಿ ಪ್ರತಿವರ್ಷ ಸೆಪ್ಟೆಂಬರ್‌ 1ರಿಂದ ಸೆಪ್ಟೆಂಬರ್‌ 7ರವರೆಗೆ ಭಾರತದಲ್ಲಿ ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಆಚರಿಸಲಾಗುತ್ತದೆ. ರಾಷ್ಟ್ರೀಯ ಪೋಷಣಾ ಸಪ್ತಾಹ ಎಂಬ ಏಳು ದಿನಗಳ ಪೌಷ್ಟಿಕಾಂಶ ಸಪ್ತಾಹ ಆಚರಿಸುವ ಮೂಲಕ ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹದ ಹಿನ್ನೆಲೆ ಏನು?

ಮೊಟ್ಟ ಮೊದಲು 1980ರಲ್ಲಿ ಪೌಷ್ಟಿಕತಾ ಸಪ್ತಾಹವನ್ನು ಭಾರತದಲ್ಲಿ ಆಚರಿಸಲಾಯಿತು. ಆದರೆ ಈ ಸಪ್ತಾಹವನ್ನು ಆಚರಿಸುವ ಬಗ್ಗೆ ಹೆಚ್ಚಿನ ಜಾಗೃತಿ ಬಂದಿದ್ದು 1982ರಿಂದ.

Vijayaprabha Mobile App free

ಆರೋಗ್ಯ ಪೂರ್ಣ ಬದುಕಿಗಾಗಿ ಆರೋಗ್ಯಪೂರ್ಣ ಆಹಾರ ಸೇವನೆ ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸಲು ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರಂಭಿಸಿತು. ಈ ಜಾಗೃತಿ ಕಾರ್ಯಕ್ರಮ ಇಂದಿಗೂ ಮುಂದುವರಿದಿದೆ. ಅಂಗವಾಡಿಯಿಂದ ಹಿಡಿದು ಶಾಲೆ, ಆಸ್ಪತ್ರೆಗಳಲ್ಲಿ ಈ ಸಪ್ತಾಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಅಪೌಷ್ಟಿಕತೆ: ವಿಶ್ವದಾದ್ಯಂತ ಪ್ರತಿವರ್ಷ 1.10 ಕೋಟಿ ಮಂದಿ ಸಾವು

ವಿಶ್ವದಲ್ಲಿ ಪ್ರತಿವರ್ಷ 1.10 ಕೋಟಿಗೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಬಹುತೇಕ ಎಲ್ಲ ದೇಶಗಳಲ್ಲಿಯೂ ಈ ಸಮಸ್ಯೆ ಇದೆ ಎಂದು ವರದಿ ಹೇಳಿದೆ. ಭಾರತ, ಅಮೆರಿಕ, ಬ್ರೆಜಿಲ್, ಪಾಕಿಸ್ತಾನ, ನೈಜಿರಿಯಾ, ರಷ್ಯಾ, ಈಜಿಪ್ಟ್, ಜರ್ಮನಿ, ಇರಾನ್ ಮತ್ತು ಟರ್ಕಿಯಲ್ಲಿ ಜನ ದಿನಕ್ಕೆ 125 ಗ್ರಾಂಗಳಿಗಿಂತ ಕಡಿಮೆ ಆಹಾರ ಸೇವಿಸುತ್ತಿರುವುದು ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತಿದೆ.

ಒಂದು ಲಕ್ಷಮಂದಿಯಲ್ಲಿ ಅಪೌಷ್ಟಿಕತೆಯಿಂದ ಸಾವಿಗೀಡಾಗುವವರ ಸಂಖ್ಯೆ ಇಂಗ್ಲೆಂಡ್‌ನಲ್ಲಿ 127 ಇದ್ದರೆ, ಅಮೆರಿಕದಲ್ಲಿ 171 ಇದೆ. ಚೀನಾದಲ್ಲಿ ಈ ಸಂಖ್ಯೆ 350 ಇದೆ.

ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಗಂಭೀರ ಸಮಸ್ಯೆ!

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ಭಾರತದಲ್ಲಿ ಜನಿಸುತ್ತಿರುವ ಮಕ್ಕಳಲ್ಲಿ ಶೇ. 15ರಷ್ಟು ಮಕ್ಕಳಲ್ಲಿ ಕಡಿಮೆ ಅನುಪಾತದ ತೂಕ ಕಂಡುಬರುತ್ತದೆ. ಅಲ್ಲದೆ ಶೇ.32ರಷ್ಟು ಮಕ್ಕಳಲ್ಲಿ ರಕ್ತಹೀನತೆ, ಶೇ.11ರಷ್ಟು ಮಕ್ಕಳಲ್ಲಿ ಅತಿಯಾದ ತೂಕ ಇರುವ ಅಂಕಿವಂಶವನ್ನು ತಿಳಿಸಿದೆ.

ತಾಯಿಯಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳ ಮೇಲೆ ಅದರ ಪರಿಣಾಮ ಬೀರಲಿದೆ. ದೇಶದಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದಂತೆ ಶೇ. 8.9 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಶೇ. 9.6 ರಷ್ಟು ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆ ಇದೆ.

ಭಾರತದಲ್ಲಿ ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಲು ಸಪ್ತಾಹ!

ಹಸಿವಿನ ಜಾಗತಿಕ ಸೂಚ್ಯಂಕದ ಪ್ರಕಾರ 116 ದೇಶಗಳ ಪೈಕಿ ಭಾರತ 101ನೇ ಸ್ಥಾನದಲ್ಲಿದೆ. ಭಾರತದಲ್ಲಿ ಬಡತನ, ಹಸಿವು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹಸಿವು, ಅಪೌಷ್ಟಿಕತೆಯ ಸಮಸ್ಯೆ ಒಂದೆಡೆ ತೀವ್ರವಾಗಿದ್ದರೆ, ಇನ್ನೊಂದೆಡೆ ಆಹಾರದ ಗುಣಮಟ್ಟದ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಕಾಣುತ್ತಿದೆ.

ಜನರು ಸಂಸ್ಕರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದು, ಅಗತ್ಯ ಪೋಷಕಾಂಶಗಳಿಂದ ದೇಹ ವಂಚಿತವಾಗಿ, ಬೊಜ್ಜು, ಮಧುಮೇಹದಂಥ ಸಮಸ್ಯೆಗಳು ಆತಂಕಕಾರಿ ಮಟ್ಟಕ್ಕೆ ಏರುತ್ತಿವೆ. ಹಾಗಾಗಿ ಈ ಸಪ್ತಾಹದ ಅವಶ್ಯಕತೆ ಇದೆ.

ದೇಹದಲ್ಲಿ ಅಪೌಷ್ಟಿಕತೆ ಕಂಡುಬಂದರೆ ಕೂಡಲೇ ಚಿಕಿತ್ಸೆ ಪಡೆಯಿರಿ

ನಿಮ್ಮ ವಯಸ್ಸು, ಎತ್ತರ ಹಾಗೂ ತೂಕವನ್ನು ಪರಿಶೀಲಿಸಿ. ತೂಕ ಕಡಡಿ ಇದ್ದರೆ, ವೈದ್ಯರಲ್ಲಿ ಯಾವ ಬಗೆಯ ಪೌಷ್ಟಿಕಾಂಶದ ಮೊರೆ ಹೋಗಬೇಕು ಎನ್ನುವುದನ್ನು ತಿಳಿಯಿರಿ. ನಿಮ್ಮ ದೇಹದಲ್ಲಿ ಯಾವ ಬಗೆಯ ಕೊರತೆ ಉಂಟಾಗಿದೆ ಎನ್ನುವುದನ್ನು ತಿಳಿದು, ಅದರ ಆರೈಕೆ ಅಥವಾ ದೇಹದಲ್ಲಿ ಆ ಅಂಶವನ್ನು ಹೆಚ್ಚಿಸುವ ಸೂಕ್ತ ಆಹಾರ ಹಾಗೂ ಔಷಧವನ್ನು ಸ್ವೀಕರಿಸಿ. ದೇಹಕ್ಕೆ ಬೇಕಾಗುವಂತಹ ಉತ್ತಮ ಕಾರ್ಬೋಹೈಡ್ರೇಟ್ಸ್, ವಿಟಮಿನ್, ಖನಿಜಾಂಶ ಹಾಗೂ ಪೋಷಕಾಂಶ ಇರುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

ಆರೋಗ್ಯಕರ ಜೀವನಶೈಲಿಗಾಗಿ ನಿತ್ಯ ಆಹಾರದಲ್ಲಿ ಈ ಅಂಶಗಳು ಇರಲಿ!

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಲ್ಲಿ, ಸಮತೋಲಿತ, ಸತ್ವಯುತವಾದ ಆಹಾರಕ್ರಮ ಅಗತ್ಯ. ಸಾಮಾನ್ಯ ಜೀವನಶೈಲಿಯನ್ನು ಹೊಂದಿದ್ದರೆ, 2200 ಕ್ಯಾಲರಿ ಶಕ್ತಿ ನೀಡುವಂಥ ಆಹಾರ ಮನುಷ್ಯಯನಿಗೆ ಬೇಕು.

ಈ ಶಕ್ತಿಯ 50-60% ಭಾಗ ಪಿಷ್ಟದಿಂದ ಬರಬೇಕು. ಶೇ. 15-20ರವರೆಗೂ ಪ್ರೊಟೀನ್‌ನಿಂದ ಶಕ್ತಿ ಪೂರೈಕೆ ಆಗಬಹುದು. ಉಳಿದಿದ್ದು ಆರೋಗ್ಯಕರ ಕೊಬ್ಬು, ನಾರು, ಖನಿಜಗಳು ಮತ್ತು ಜೀವಸತ್ವಗಳಿಂದ ಬರಬೇಕು. ಇದಕ್ಕಾಗಿ ಧಾನ್ಯಗಳು, ಬೇಳೆಗಳು, ಸಿರಿ ಧಾನ್ಯಗಳು, ತರಕಾರಿಗಳನ್ನು ಸೇರಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.