2025 ರ ಶಾಕಿಂಗ್ ಭವಿಷ್ಯವಾಣಿ ನುಡಿದ ಬಾಬಾ ವಂಗಾ

Baba Vanga Prediction: ಜಗತ್ತೀನ ಆಗು ಹೋಗುಗಳನ್ನು ಶತಮಾನದ ಹಿಂದೆ ಬರೆದಿಟ್ಟ ಮಹಾನ್ ಭವಿಷ್ಯಕಾರ ಬಾಬಾ ವಾಂಗ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡರೂ, 2025ರಲ್ಲಿ ಜಗತ್ತಿನಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ…

Baba Vanga Prediction: ಜಗತ್ತೀನ ಆಗು ಹೋಗುಗಳನ್ನು ಶತಮಾನದ ಹಿಂದೆ ಬರೆದಿಟ್ಟ ಮಹಾನ್ ಭವಿಷ್ಯಕಾರ ಬಾಬಾ ವಾಂಗ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡರೂ, 2025ರಲ್ಲಿ ಜಗತ್ತಿನಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಅವರ ಭವಿಷ್ಯವನ್ನು ನುಡಿದಿದ್ದಾರೆ.

ಹೌದು, ಬಾಬಾ ವಂಗಾ ಅವರು ನುಡಿದ ಈ ಹಿಂದಿನ ಭವಿಷ್ಯವಾಣಿಗಳನ್ನು ತಾಳೆ ಹಾಕಿ ನೋಡಿದಾಗ ಸರಿ ಹೊಂದುತ್ತಿದ್ದು, ಸೋವಿಯತ್ ಒಕ್ಕೂಟದ ವಿಘಟನೆ, ರಾಜಕುಮಾರಿ ಡಯಾನಾ ಸಾವು, 2004 ರ ಥೈಲ್ಯಾಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷರಾಗುವುದು ಮತ್ತು ಅಮೆರಿಕದಲ್ಲಿ 9/11 ಭಯೋತ್ಪಾದಕ ದಾಳಿಗಳು ಸೇರಿದಂತೆ ಅನೇಕ ಭವಿಷ್ಯವಾಣಿಗಳನ್ನು ಬಾಬಾ ವಾಂಗ್ ನುಡಿದಿದ್ದರು. ಅದು ನಂತರ ನಿಜವೆಂದು ಸಾಬೀತಾಯಿತು.

ಈಗ ಬಾಬಾ ವಂಗಾ 2025ರ ಬಗ್ಗೆ ಹೇಳಿರುವು ಭವಿಷ್ಯವಾಣಿ ಎಲ್ಲರ ನಿದ್ದೆ ಗೆಡಿಸಿದ್ದು, 2025 ರಲ್ಲಿ ಯುರೋಪ್ನಲ್ಲಿ ದುರಂತ ಸಂಘರ್ಷ ಪ್ರಾರಂಭವಾಗಲಿದ್ದು, ಇದು ಎಲ್ಲೆಡೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಕಾರಣದಿಂದಾಗಿ, ಹೆಚ್ಚಿನ ಜನಸಂಖ್ಯೆಯ ಖಂಡದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಯುರೋಪಿನ ಜನಸಂಖ್ಯೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ವರ್ಷದಲ್ಲಿ ಜಗತ್ತು ಅವನತಿಯತ್ತ ಸಾಗಬಹುದು ಎಂದು ತಿಳಿಸಿದ್ದಾರೆ.

Vijayaprabha Mobile App free

2033 ರಲ್ಲಿ ಹವಾಮಾನ ಬದಲಾವಣೆಯು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭವಿಷ್ಯ ನುಡಿದಿದ್ದು, ಇನ್ನು ಮಂಜುಗಡ್ಡೆಯ ಕರಗುವಿಕೆಯಿಂದ ಪ್ರಪಂಚದಾದ್ಯಂತ ಸಮುದ್ರ ಮಟ್ಟದಲ್ಲಿ ಭಾರಿ ಏರಿಕೆಗೆ ಆಗುತ್ತದೆ. 2170 ರಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜಗತ್ತು ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲಿದ್ದು, ಈ ಪರಿಸ್ಥಿತಿಯು ಭವಿಷ್ಯದಲ್ಲಿ ಗಂಭೀರವಾಗುತ್ತದೆ ಮತ್ತು ಭೂಮಿಯು 3797 ರಲ್ಲಿ ನಾಶವಾಗಬಹುದು ಎಂದು ತಿಳಿಸಿದ್ದಾರೆ.

ಬಾಬಾ ವಾಂಗಾ ಅವರ ಭವಿಷ್ಯವಾಣಿಯ ಪ್ರಕಾರ, 3005 ರಲ್ಲಿ ಭೂಮಿ ಮತ್ತು ಮಂಗಳ ನಡುವೆ ಯುದ್ಧ ಸಂಭವಿಸಬಹುದು ಎನ್ನಲಾಗಿದ್ದು, 5079 ರ ಹೊತ್ತಿಗೆ ಜಗತ್ತು ಕೊನೆಗೊಳ್ಳುತ್ತದೆ. 3797 ರ ಹೊತ್ತಿಗೆ, ಭೂಮಿಯ ಮೇಲೆ ವಾಸಿಸಲು ಅಸಾಧ್ಯವಾಗುತ್ತದೆ, ಇದರಿಂದಾಗಿ ಮಾನವರು ಬೇರೆ ಯಾವುದಾದರೂ ಗ್ರಹದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ. 5079 ರಲ್ಲಿ ಭೂಮಿಯಿಂದ ಎಲ್ಲವೂ ಕಣ್ಮರೆಯಾಗುತ್ತದೆ ಮತ್ತು ಪ್ರಪಂಚವು ಅಂತ್ಯಗೊಳ್ಳುತ್ತದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.