ಚನ್ನಪಟ್ಟಣ ಟಿಕೆಟ್: ಮೈತ್ರಿಯಲ್ಲಿ ಅಸಮಾಧಾನ? ಎಷ್ಟೇ ಮನವೊಲಿಕೆ ಮಾಡಿದರೂ ಮಣಿದಿಲ್ಲ HDK..!

Channapatnam by-election ticket: ಚನ್ನಪಟ್ಟಣ ಉಪಚುನಾವಣೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವ‌ರ್ ಅವರಿಗೆ ಟಿಕೆಟ್ ನೀಡಲು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಒಪ್ಪುತ್ತಿಲ್ಲ. ಇದೊಂದು ಬಾರಿ ಯೋಗೇಶ್ವರ್ ಅವರಿಗೆ ಸೀಟು ಬಿಟ್ಟು ಕೊಡಿ ಎಂದು ಬಿಜೆಪಿ…

Channapatnam by-election ticket: ಚನ್ನಪಟ್ಟಣ ಉಪಚುನಾವಣೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವ‌ರ್ ಅವರಿಗೆ ಟಿಕೆಟ್ ನೀಡಲು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಒಪ್ಪುತ್ತಿಲ್ಲ.

ಇದೊಂದು ಬಾರಿ ಯೋಗೇಶ್ವರ್ ಅವರಿಗೆ ಸೀಟು ಬಿಟ್ಟು ಕೊಡಿ ಎಂದು ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ಅಶೋಕ್‌, ಸಿ.ಟಿ. ರವಿ, ಅಶ್ವತ್ಥನಾರಾಯಣ, ಅರವಿಂದ ಬೆಲ್ಲದ್ ಅವರು ದೆಹಲಿಯಲ್ಲಿ ಮನವೊಲಿಕೆ ಮಾಡಿದರೂ ಕುಮಾರಸ್ವಾಮಿ ಮಣಿದಿಲ್ಲ ಎಂದು ಹೇಳಲಾಗುತ್ತಿದೆ.

ಚನ್ನಪಟ್ಟಣ: ಉಪ ಚುನಾವಣಾ ಕಣದಲ್ಲಿ ಗಣೇಶ ರಾಜಕಾರಣ

ಇನ್ನು, ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳಾದ ಬಿಜೆಪಿಯ ಸಿ ಪಿ ಯೋಗೇಶ್ವರ್ ಮತ್ತು ಜೆಡಿಎಸ್‌ನ ಜಯಮುತ್ತು ಗಣೇಶ ಹಬ್ಬಕ್ಕೆ ಗಣೇಶ ಮೂರ್ತಿ ವಿತರಣೆಗೆ ಮುಂದಾಗಿದ್ದಾರೆ.

Vijayaprabha Mobile App free

ಆಗಸ್ಟ್ 22 ರಿಂದಲೇ ಮೂರ್ತಿಗಾಗಿ ನೋಂದಣಿ ಆರಂಭಗೊಂಡಿದ್ದು, ಚನ್ನಪಟ್ಟಣದಲ್ಲಿ ಮೈತ್ರಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯಲು ಯೋಗೇಶ್ವರ್‌ ಸಿದ್ಧತೆ ನಡೆಸಿದ್ದರೆ,‌ ಕ್ಷೇತ್ರವನ್ನು ಜೆಡಿಎಸ್‌ನಲ್ಲೇ ಉಳಿಸಿಕೊಳ್ಳಲು ಬಯಸಿದಲ್ಲಿ ನಿಖಿಲ್‌ಗೆ ಪರ್ಯಾಯವಾಗುವ ಲೆಕ್ಕಾಚಾರದಲ್ಲಿ ಜಯಮುತ್ತು ಇದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.