Gruhalakshmi yojana: ಗೃಹಲಕ್ಷ್ಮಿ ಯೋಜನೆಗೆ (Gruhalakshmi yojana) ಮತ್ತೆ ತಾಂತ್ರಿಕ ದೋಷ (technical error) ಆರಂಭ ಆಗಿದ್ದು, ಈ ಸಮಸ್ಯೆಯಿಂದ 80 ಸಾವಿರಕ್ಕೂ ಹೆಚ್ಚು ಗೃಹಲಕ್ಷ್ಮಿಯರಿಗೆ ಹಣ ಖಾತೆಗೆ ಜಮೆ ಆಗಿಲ್ಲ. ತಾಂತ್ರಿಕ ಸಮಸ್ಯೆ ಪರಿಣಾಮದಿಂದ 3 ತಿಂಗಳಿನಿಂದ ಹಣ ಗೃಹಿಣಿಯರ ಖಾತೆ ಸೇರಿಲ್ಲ.
ಸದ್ಯ ಗೃಹಲಕ್ಷ್ಮಿ ಯೋಜನೆಯಲ್ಲಿ 1 ಕೋಟಿ 23 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, 90 ಲಕ್ಷ ಜನರ ಖಾತೆಗೆ ಮಾತ್ರ ಹಣ ಜಮಾ ಆಗಿದೆ ಎಂದು ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
Gruhalakshmi yojana: ‘ಈ ಜನರ ಗೃಹಲಕ್ಷ್ಮಿ ಅರ್ಜಿ ತಿರಸ್ಕಾರ’
ಇನ್ನು, ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಹೌದು, ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲಿನಿಂದಲೂ ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ. ಆದರೆ, ಜಿಎಸ್‌ಟಿ ಇದ್ದವರೂ ನಮ್ಮ ಪೋರ್ಟಲ್ಗೆ ಅರ್ಜಿ ಹಾಕಿದ್ದರು. ಅವುಗಳನ್ನು ನಾವು ತಿರಸ್ಕಾರ ಮಾಡಿದ್ದೇವೆ. ಸುಮಾರು 15 ಸಾವಿರ ಅರ್ಜಿಗಳನ್ನು ಜಿಎಸ್‌ಟಿ ಇರುವ ಕಾರಣಕ್ಕೆ ಅರ್ಜಿ ತಿರಸ್ಕಾರ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
Gruhalakshmi yojana: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬಹುದು?
- ಗೃಹ ಲಕ್ಷ್ಮಿ ಯೋಜನೆಗೆ ಅರ್ಹ ಮಹಿಳೆಯರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
- ಸೇವಾ ಸಿಂಧು ಗ್ಯಾರಂಟಿ ಸ್ಕೀಮ್ಸ್ ಪೋರ್ಟಲ್ ಗೆ ಭೇಟಿ ನೀಡಿ.
- ಗೃಹಲಕ್ಷ್ಮಿ ಯೋಜನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಪಾಪ್-ಅಪ್ ಬಾಕ್ಸ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಯೋಜನೆಗೆ ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ. ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
- ಗ್ರಾಮ ಒನ್, ಕರ್ನಾಟಕ ಒನ್ ಕಚೇರಿ ಮತ್ತು ನಾಡಕಚೇರಿಗಳಲ್ಲಿ ಆಫ್ಲೈನ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.
https://vijayaprabha.com/world-best-stock-markets/