Actress Namitha insulted : ಮಧುರೈ ಮೀನಾಕ್ಷಿ (Madurai Meenakshi) ಅಮ್ಮನ ದೇವಸ್ಥಾನದ ಸಿಬ್ಬಂದಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ನಮಿತಾ (Namitha) ಹೇಳಿದ್ದಾರೆ.
ಹೌದು, ತಮಿಳುನಾಡಿನ ಮಧುರೈನ ಮೀನಾಕ್ಷಿ ದೇವಾಲಯಕ್ಕೆ ಪತಿ ಜೊತೆ ತೆರಳಿದಾಗ ನನಗೆ ಗರ್ಭಗುಡಿ ಪ್ರವೇಶಿಸಲು ಅವಕಾಶ ನೀಡುವ ಮೊದಲು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಸಿಬ್ಬಂದಿ ತಮ್ಮ ಧಾರ್ಮಿಕ ಸಂಬಂಧದ ಪುರಾವೆ (ಜಾತಿ ಪ್ರಮಾಣಪತ್ರ) ಕೇಳಿದರು ಎಂದು ನನಟಿ ಹಾಗೂ ಬಿಜೆಪಿ ನಾಯಕಿ ನಮಿತಾ ಹಾಗೂ ಪತಿ ವೀರೇಂದ್ರ ಚೌಧರಿ ಆರೋಪಿಸಿದ್ದಾರೆ.
ಬೇರೆ ಯಾವುದೇ ದೇವಸ್ಥಾನದಲ್ಲೂ ಇಂತಹ ಅವಮಾನ ಆಗಿಲ್ಲ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಅವರು ಹೇಳಿದ್ದಾರೆ. “ನಮ್ಮನ್ನು 20 ನಿಮಿಷಗಳ ಕಾಲ ಕಾಯಿಸಿ, ನಾವು ಹಿಂದೂಗಳು ಎಂದು ಸಾಬೀತು ಮಾಡಲು ಪ್ರಮಾಣಪತ್ರ ಕೇಳಿದರು. ಬೇರೆ ಯಾವುದೇ ದೇವಸ್ಥಾನದಲ್ಲೂ ಇಂತಹ ಅವಮಾನ ಆಗಿಲ್ಲ” ಎಂದು ನಮಿತಾ ತಿಳಿಸಿದ್ದಾರೆ.
ಅಂದಹಾಗೆ ನಟಿ ನಮಿತಾ ನಟ ರವಿಚಂದ್ರನ್ ಜೊತೆ ನೀಲಕಂಠ, ಹೂ ಸೇರಿದಂತೆ ಕನ್ನಡಲ್ಲಿ ಇಂದ್ರ , ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
https://vijayaprabha.com/rape-and-pocso-case-in-the-state/