Shri Krishna Janmashtami: ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು (Shri Krishna Janmashtami) ಆಗಸ್ಟ್ 26ರ ಸೋಮವಾರ ಆಚರಿಸಲಾಗುತ್ತಿದ್ದು, ಈ ರಾಶಿಯವರ ಮೇಲಿದೆ ಶ್ರೀಕೃಷ್ಣನ ಆಶೀರ್ವಾದ ಸಿಗಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ದಿನ ರಾತ್ರಿ ಪೂಜೆ ಬಹಳ ಮುಖ್ಯ. ಏಕೆಂದರೆ ಶ್ರೀಕೃಷ್ಣ ರಾತ್ರಿಯಲ್ಲಿ ಜನಿಸಿದವನು. ಅಲ್ಲದೆ ಈ ದಿನ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅನೇಕ ಜನ್ಮಗಳ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಕೃಷ್ಣ ಜನ್ಮಾಷ್ಟಮಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ!
ಮಹಾವಿಷ್ಣುವಿನ 8 ಅವತಾರವೇ ಶ್ರೀ ಕೃಷ್ಣ. ಜಗತ್ತಿಗೆ ಭಗವದ್ಗೀತೆಯನ್ನು ಸಾರಿದ ಶ್ರೀಕೃಷ್ಣನು ಹುಟ್ಟಿದ ದಿನವೇ ಕೃಷ್ಣ ಜನ್ಮಾಷ್ಟಮಿ. ಈ ದಿನ ಅನೇಕ ಕೆಲಸ ಮಾಡಲು ಬಹಳ ಶುಭ. ಅಲ್ಲದೆ ಈ ದಿನ ಮನೆಗೆ ಕೃಷ್ಣನಿಗೆ ಸಂಬಂಧಿಸಿದ ಕೆಲ ವಸ್ತಗಳನ್ನು ತಂದರೆ ಒಳಿತು ಎನ್ನಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ ದಿನ ಶಂಖವನ್ನು ತಂದು ಪೂಜಿಸಿ, ಹಣ ಇಡುವ ಸ್ಥಳದಲ್ಲಿ ಇಟ್ಟರೆ ಶುಭವಾಗುತ್ತದೆ. ಅಲ್ಲದೆ ನವಿಲುಗರಿ, ತುಳಸಿ ಮಾಲೆ, ಜೊತೆಗೆ ಕೊಳಲನ್ನು ಮನೆಗೆ ತಂದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.
ಕೃಷ್ಣ ಜನ್ಮಾಷ್ಟಮಿ: ಈ ರಾಶಿಯವರ ಮೇಲಿದೆ ಶ್ರೀಕೃಷ್ಣನ ಆಶೀರ್ವಾದ..!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷ ಜನ್ಮಾಷ್ಟಮಿಯಂದು ಕೆಲವು ರಾಶಿಯವರಿಗೆ ತುಂಬಾ ಶುಭಕರ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ವೃಷಭ, ಕರ್ಕ, ಸಿಂಹ & ತುಲಾ ರಾಶಿಯವರಿಗೆ ಕೃಷ್ಣನ ಕೃಪೆಯಿಂದ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅತ್ಯಂತ ಸುಲಭವಾಗಿ ಯಶಸ್ಸು ಗಳಿಸುವ ಶಕ್ತಿ ದೊರೆಯುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಕೈಗೆತ್ತಿಕೊಂಡ ಕಾರ್ಯ ಪೂರ್ಣಗೊಳ್ಳುತ್ತದೆ.
https://vijayaprabha.com/bpl-card-only-for-those-with-serious-illness/