ಲಕ್ಷ್ಮಿ ಬಾರಮ್ಮ ಗೊಂಬೆ ಸೀಮಂತ ಸಂಭ್ರಮ: ಮೊದಲ ಮಗುವಿನ ಆಗಮನದ ಖುಷಿಯಲ್ಲಿ ನೇಹಾ..!

ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ನೇಹಾ ಗೌಡ ಹಾಗೂ ನಟ ಚಂದನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯದಲ್ಲೇ ಈ ಜೋಡಿ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದ್ದು ಮೊದಲ ಮಗುವಿನ…

ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ನೇಹಾ ಗೌಡ ಹಾಗೂ ನಟ ಚಂದನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ಯದಲ್ಲೇ ಈ ಜೋಡಿ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದ್ದು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.

ಇತ್ತೀಚೆಗೆ ಕಿರುತೆರೆಯ ಮುದ್ದು ಗೊಂಬೆ ನೇಹಾ ಗೌಡ ಅವರ ಸೀಮಂತ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನಡೆದಿದೆ. ಸಾಕಷ್ಟು ಕಿರುತೆರೆ ಕಲಾವಿಧರು ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೊಂಬೆಗೆ ಶುಭ ಹಾರೈಸಿದ್ದಾರೆ.

ಅದ್ದೂರಿಯಾಗಿ ನಡೆದ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ನೇಹಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರು ಕೂಡ ನೇಹಾ ಗೌಡಗೆ ಶುಭ ಹಾರೈಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರವಾಹಿಯಲ್ಲಿ ನೇಹಾ ಪತ ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ. ಅಂತರಪಟ ಧಾರಾವಾಹಿ ತಂಡ ನೇಹಾ ಸೀಮಂತ ಕಾರ್ಯಕ್ರಮದಲ್ಲಿ ಪಾಲೊಂಡಿತ್ತು. ಅಂತರಪಟ ಧಾರಾವಾಹಿ ಡೈರೆಕ್ಟರ್ ಸ್ವಪ್ನ ಕೃಷ್ಣ, ಸೀಮಂತದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಸ್ವಪ್ನ ಕೃಷ್ಣ ಗೊಂಬೆ ಜೊತೆಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Vijayaprabha Mobile App free

ನಟಿ ನೇಹಾ ಗೌಡ ಸೀಮಂತ ಕಾರ್ಯಕ್ರಮ ಇಂದು ನಡೆದಿದೆ. ಹಾಗಾಗಿ ನೇಹಾ ಗೌಡ ಇನ್ನೂ ಫೋಟೋಗಳನ್ನು ಹಂಚಿಕೊಂಡಿಲ್ಲ. ಅವರ ಖಾತೆಯಿಂದ ಇನ್ನೊಂದಿಷ್ಟು ಸುಂದರ ಫೋಟೋ, ವಿಡಿಯೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಎರಡು ವಾರಗಳ ಹಿಂದೆ ಪತಿ ಚಂದನ್ ಗೌಡ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ ನೇಹಾ ಗೌಡ, ಮೂರು ದಿನಗಳ ಹಿಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಆಪ್ತ ಗೆಳತಿ ಅನುಪಮಾ ಗೌಡ, ನೇಹಾಗೆ ವಿಶ್ ಮಾಡಿದ್ದ ಸುಂದರ ವಿಡಿಯೋ ಒಂದು ಸಾಕಷ್ಟು ಸುದ್ದಿ ಮಾಡಿತ್ತು.

ರಾಜಾ ರಾಣಿ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ನೇಹಾ ಪತಿ  ಚಂದನ್ ಗೌಡ ಅಂತರಪಟ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ ಎನ್ನಲಾಗ್ತಿದೆ. ಗೊಂಬೆ ಹಾಗೂ ಚಂದನ್ ಮದುವೆಯಾಗಿ ಆರು ವರ್ಷ ಕಳೆದಿದೆ. 2018ರಲ್ಲಿ ನೇಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಈಗ ದಂಪತಿ ಮಗುವಿನ ಆಗಮನಕ್ಕೆ ಎಲ್ಲ ತಯಾರಿ ನಡೆಸಿದ್ದಾರೆ. ಹೆಣ್ಣು ಮಗು ಅಂದ್ರೆ ನನಗೆ ತುಂಬಾ ಇಷ್ಟ ಎಂದು ಈ ಹಿಂದೆ ನಟಿ ನೇಹಾ ಹೇಳಿದ್ದರು.

34 ವರ್ಷದ ನೇಹಾ ಗೌಡ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಎಲ್ಲರ ಗೊಂಬೆಯಾದ್ರು. ರಾಜಾ ರಾಣಿ, ಬಿಗ್ ಬಾಸ್ ಶೋನಲ್ಲಿ ಮಿಂಚಿರುವ ನೇಹಾ ಸದ್ಯ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಜೀವನದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿದ್ದಾರೆ. ಜೂನ್ ನಲ್ಲಿ ಇಬ್ಬರು ಮೂವರಾಗ್ತಿದ್ದೇವೆ ಎಂದು ನೇಹಾ ಹಾಗೂ ಚಂದನ್ ಹೇಳಿದ್ದರು. ಅಲ್ಲದೆ ಮಗುವಿನ ಸ್ಕ್ಯಾನಿಂಗ್ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ತುಂಬಾ ವೈರಲ್ ಆಗಿತ್ತು. ನಟಿ ನೇಹಾ ಅವರು ಸೀಮಂತಕ್ಕೆ ಗುಲಾಬಿ ಹಾಗೂ ಹಸಿರು ಬಣ್ಣದ ಸೀರೆಯಲ್ಲಿ ಸಿಂಗಾರ ಮಾಡಿಕೊಂಡು ಮುದ್ದಾಗಿ ಕಂಗೊಳಿಸುತ್ತಿದ್ದರು. ಇತ್ತೀಚೆಗಷ್ಟೇ ನಿ ನೇಹಾ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಇದರಲ್ಲಿ ಸಿಂಪಲ್ ಆಗಿ ಸೀರೆಯುಟ್ಟು ಪತಿ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದರು. ನವಿಲು ಗರಿಯನ್ನು ಮಗುವಿನಂತೆ ಕೈಯಲ್ಲಿ ಹಿಡಿದು ತೆಗೆಸಿಕೊಂಡ ಫೋಟೋ ಅದ್ಭುತವಾಗಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.