Bhovi scam: BJP ಕಾಲದಲ್ಲಿ ನಡೆದಿದೆ ಎನ್ನಲಾದ ಭೋವಿ ಹಗರಣದಲ್ಲಿ CID ಮತ್ತೊಂದು ಭರ್ಜರಿ ಬೇಟೆಯಾಡಿದ್ದು, ಭೋವಿ ನಿಗಮದ (Bhovi Corporation) ಮಾಜಿ MDಯ ತಂಗಿಯನ್ನು ಅರೆಸ್ಟ್ ಮಾಡಲಾಗಿದೆ.
ಹೌದು, BJP ಕಾಲದಲ್ಲಿ ನಡೆದಿದೆ ಎನ್ನಲಾದ ಭೋವಿ ಹಗರಣದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ (Rajya Bhovi Development Corporation) ಮಾಜಿ MD ಆರ್. ಲೀಲಾವತಿ (R. Lilavati) ಅವರ ಸಹೋದರಿ ಆರ್. ಮಂಗಳಾ ಅವರನ್ನು CID ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
IISCಯ ಮಾಜಿ ಉದ್ಯೋಗಿಯಾಗಿರುವ ಅವರು ತಮ್ಮ ಸಹೋದರಿ ಲೀಲಾವತಿ ಪರ 2 ಕೋಟಿ ಹಣವನ್ನು ಸ್ವೀಕರಿಸಿದ್ದರು ಎಂಬುದು CID ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು ಎಂದು CID ಉನ್ನತ ಮೂಲಗಳು ತಿಳಿಸಿವೆ.
Bhovi scam: ಏನದು ʻಭೋವಿʼ ಹಗರಣ?
- ಬಡ ಭೋವಿ ಉದ್ಯಮಿಗಳಿಗೆ ಭೋವಿ ನಿಗಮದಿಂದ ಸಾಲ ನೀಡುವ ಯೋಜನೆಯಲ್ಲಿ 2021, 2022ರಲ್ಲಿ ಅವ್ಯವಹಾರ ಆರೋಪ
- ಸಾಲ ನೀಡುವ ನೆಪದಲ್ಲಿ ನಕಲಿ ಕಂಪನಿಗಳಿಗೆ ಹಣ ಕಳುಹಿಸಿ, ಅಲ್ಲಿಂದ ಕಿಕ್‌ಬ್ಯಾಕ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು?
- 2023ರಲ್ಲಿ ಬೆಂಗಳೂರು, ಕಲಬುರ್ಗಿ, ಬೆಂ. ಗ್ರಾಮಾಂತರದಲ್ಲಿ FIR. CID ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ.
- ಇತ್ತೀಚೆಗೆ ಭೋವಿ ನಿಗಮದ ಕಚೇರಿ ಅಧೀಕ್ಷಕ ಸುಬ್ಬಪ್ಪ ಬಂಧನ. ತಲೆಮರೆಸಿಕೊಂಡಿದ್ದ ಮಾಜಿ ಎಂಡಿ ಲೀಲಾವತಿ.
- ಈಗ ಲೀಲಾವತಿ ಸಹೋದರಿ ಎಂ. ಮಂಗಳಾ ಬಂಧನ.
https://vijayaprabha.com/hsrp-number/