ಮಲಬದ್ಧತೆ ಸಮಸ್ಯೆಗೆ ಇಲ್ಲಿವೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ ಬದಲು ಕೆಲವೊಂದು ಮನೆಮದ್ದುಗಳನ್ನು ಮಾಡಿ…

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ ಬದಲು ಕೆಲವೊಂದು ಮನೆಮದ್ದುಗಳನ್ನು ಮಾಡಿ ನೋಡಿ. ಮೊದಲನೆಯದಾಗಿ ಎಣ್ಣೆಯನ್ನು ಅಡುಗೆಯಲ್ಲಿ ಕಡಿಮೆ ಬಳಸಿ.

ಕರಿದ ಪದಾರ್ಥಗಳು ಹಾಗೂ ಎಣ್ಣೆಯುಕ್ತ ಆಹಾರಗಳಿಂದ ದೂರವಿರಿ. ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನೇ ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಪ್ರತಿ ಗಂಟೆಗೊಮ್ಮೆ ಏನಾದರೂ ಕುರುಕಲು ತಿನ್ನುವ ಅಭ್ಯಾಸ ಬೇಡ. ತಿಂದ ಆಹಾರ ಜೀರ್ಣವಾಗಲು ದೇಹಕ್ಕೆ ಸಮಯ ಕೊಡಿ. ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಓಮ ಮತ್ತು ಜೀರಿಗೆಯನ್ನು ಬಳಸಬಹುದು. ಇವೆರಡನ್ನೂ ಡ್ರೈ ರೋಸ್ಟ್‌ ಮಾಡಿಕೊಂಡು ಪುಡಿ ತಯಾರಿಸಿ. ಇದಕ್ಕೆ ಸ್ವಲ್ಪ ಬ್ಲಾಕ್‌ ಸಾಲ್ಟ್‌ ಕೂಡ ಮಿಕ್ಸ್‌ ಮಾಡಿಟ್ಟುಕೊಳ್ಳಿ.

ಈ ಮಿಶ್ರಣವನ್ನು ನಿಯಮಿತವಾಗಿ ಬಳಸುತ್ತ ಬಂದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಬೆಳಗ್ಗೆ ನಿತ್ಯಕರ್ಮಗಳಿಗೆ ಹೋಗುವ ಮುನ್ನ ಒಂದು ಲೋಟ ಉಗುರು ಬೆಚ್ಚನೆಯ ನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಬಿಸಿ ನೀರು ಕುಡಿದಾಗ ಒತ್ತಡದ ಅನುಭವವಾಗುತ್ತದೆ. ಹಾಗಾಗದಿದ್ದರೆ ಸ್ವಲ್ಪ ಹೊತ್ತು ವಾಕ್‌ ಮಾಡಿ ನಂತರ ಮಲ ವಿಸರ್ಜನೆಗೆ ಹೋಗಬೇಕು. ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಸೂಪರ್‌ಫುಡ್‌ನಲ್ಲಿ ಅನೇಕ ಪೋಷಕಾಂಶಗಳಿವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಮಲಬದ್ಧತೆ ದೂರವಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.