ವಯನಾಡು ಭೂಕುಸಿತ ದುರಂತ : 10 ಲಕ್ಷ ದೇಣಿಗೆ ಕೊಟ್ಟ ನಟಿ ರಶ್ಮಿಕಾ ಮಂದಣ್ಣ..!!

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಜನರ ಪ್ರೀತಿ ಕಂಡು ಅಚ್ಚರಿಗೊಂಡಿದ್ದರು. ಈಗ ನಟಿ ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.…

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಜನರ ಪ್ರೀತಿ ಕಂಡು ಅಚ್ಚರಿಗೊಂಡಿದ್ದರು. ಈಗ ನಟಿ ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ವಯನಾಡಿನ ದುರಂತಕ್ಕೆ ಪರಿಹಾರವಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ನಟಿ 10 ಲಕ್ಷ ರೂ ದೇಣಿಗೆ ಕೊಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕೇರಳದ ಅತ್ಯಂತ ಭೀಕರ ದುರಂತದಲ್ಲಿ ಸಹಾಯ ಮಾಡಿದ್ದಾರೆ. ಭೂಕುಸಿತದಿಂದ ತತ್ತರಿಸಿರುವ ವಯನಾಡ್‌ಗೆ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಶ್ಮಿಕಾ ಮಂದನಾ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಪರಭಾಷಾ ನಟಿಯಾಗಿದ್ದು, ಕೇರಳದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

Vijayaprabha Mobile App free

ತಮಿಳಿನ ಖ್ಯಾತ ಸಿನಿಮಾ ಸೆಲೆಬ್ರಿಟಿಗಳಾದ ಸೂರ್ಯ, ಕಾರ್ತಿ ಮತ್ತು ಜ್ಯೋತಿಕಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಜುಲೈ 31 ರಂದು ಸೂರ್ಯ ತಮ್ಮ ‘ಟ್ವಿಟರ್ ಪೋಸ್ಟ್‌ನಲ್ಲಿ ವಯನಾಡ್ ಜನರ ನೋವನ್ನು ಕಂಡು ಎದೆಗುಂದಿದ್ದೇನೆ ಎಂದು ಬರೆದಿದ್ದಾರೆ. ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.