ಗಮನಸಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇದೇ ನೋಡಿ ಕೊನೆಯ ದಿನಾಂಕ

(aadhar card) ಸರ್ಕಾರ ಅಥವಾ ಇನ್ನಿತರ ಯಾವುದೇ ಕ್ಷೇತ್ರದಿಂದ ನೀವು ಯೋಜನೆಯ ಲಾಭ (ಪ್ರಯೋಜನ) ಪಡೆಯಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕು. ದಾಖಲೆಗಳಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಗಳು ಮುಖ್ಯವಾಗಿದೆ.…

(aadhar card) ಸರ್ಕಾರ ಅಥವಾ ಇನ್ನಿತರ ಯಾವುದೇ ಕ್ಷೇತ್ರದಿಂದ ನೀವು ಯೋಜನೆಯ ಲಾಭ (ಪ್ರಯೋಜನ) ಪಡೆಯಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕು. ದಾಖಲೆಗಳಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಗಳು ಮುಖ್ಯವಾಗಿದೆ. ಕೆಲವು ದಾಖಲೆಗಳ ಭದ್ರತೆಗಾಗಿ ಹಾಗೂ ಖಚಿತ ಮಾಹಿತಿಗಾಗಿ ಸರ್ಕಾರ ದಾಖಲೆಗಳ ಲಿಂಕ್ ಅಥವಾ ಅಪ್ಡೇಟ್ ಮಾಡಲು ಸೂಚಿಸಲಾಗುತ್ತದೆ. ಅದೇ ರೀತಿ ಈಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14, 2024 ಕೊನೆಯ ದಿನಾಂಕವಾಗಿದೆ. ಅಪ್ಡೇಟ್ ಮಾಡುವುದು ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರು ಆಧಾರ್ ಅಪ್ಡೇಟ್ ಮಾಡಿಸಬೇಕು:
ಹತ್ತು ವರ್ಷಗಳಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಅವಕಾಶವಿದೆ. ಸೆಪ್ಟೆಂಬರ್ 14, 2024 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಬಹುದು. ಇದರ ನಂತರ ಈ ಕೆಲಸವನ್ನು ಮಾಡಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಧಿಕೃತ ಲಿಂಕ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ. ಅನೇಕ ಕೆಲಸಗಳಲ್ಲಿ ನವೀಕರಿಸಿದ ಆಧಾರ್ ಕಾರ್ಡ್ ಅಗತ್ಯವಿದೆ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡದೇ ಇರುವವರು ಸೆಪ್ಟೆಂಬರ್ 14 ರೊಳಗೆ ಅಪ್ಡೇಟ್ ಮಾಡಬಹುದಾಗಿದೆ.

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಸರಳ ಹಂತಗಳು ಇಲ್ಲಿವೆ:

Vijayaprabha Mobile App free
  • ಮೊದಲಿಗೆ ಈ ವೆಬ್ ಸೈಟ್ ಗೆ ಭೇಟಿ ನೀಡಿ ( https://myaadhaar.uidai.gov.in/)
  • ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ’ ಆಯ್ಕೆಯನ್ನು ಆರಿಸಿ.
  • ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ.
  • ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿವಾಸಿಯ ಪ್ರಸ್ತುತ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
  • ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್ ಲಿಂಕ್ ಕ್ಲಿಕ್ ಮಾಡಿ.
  • ಈಗ ಡ್ರಾಪ್ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಆಯ್ಕೆ ಮಾಡಿ.
  •  ನಿಮ್ಮ ವಿಳಾಸಕ್ಕೆ ಸಂಬಂಧಿಸಿದ ಪುರಾವೆಗಳನ್ನು ಅಪ್ಲೋಡ್ ಮಾಡಿ
  • ಈಗ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ ಮತ್ತು ನಿರ್ದಿಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಕೊನೆಯ 14 ಅಂಕಿಗಳ ನವೀಕರಣ ರೆಡ್ವೆಸ್ಟ್ ಸಂಖ್ಯೆ (ಯುಆರ್ಎನ್) ರಚಿಸಿದ ನಂತರ ನಿಮ್ಮ ಆಧಾರ್ ನವೀಕರಣ ವಿನಂತಿಯನ್ನು ಅನುಮೋದಿಸಲಾಗುತ್ತದೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.