ದೇವರ ನಾಡು ಕೇರಳದಲ್ಲಿ ರಶ್ಮಿಕಾ ಬೋಲ್ಡ್‌ ಡಾನ್ಸ್; ಫ್ಯಾನ್ಸ್ ಫುಲ್ ಫಿದಾ

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 2000…

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 2000 ಕ್ಕೂ ಹೆಚ್ಚು ಜನ ನಟಿಯನ್ನು ನೋಡಲು ಮುಗಿ ಬಿದ್ದಿದ್ದರು. ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 

ಇದೀಗ ರಶ್ಮಿಕಾ ಫೋಟೊ ಶೇರ್‌ ಮಾಡಿ “ನಾನು ನಿಮ್ಮೆಲ್ಲರನ್ನು ಭೇಟಿಯಾದಾಗ ನನ್ನ ಹೃದಯ ತುಂಬಿ ಬಂತು. ಧನ್ಯವಾದಗಳು ಕರುನಾಗಪಲ್ಲಿ. ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಹೀಗಾಗಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ನಿನ್ನೆ (ಜು. 25) ಕೇರಳದ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು, ಆದರೆ ನಟಿಯನ್ನು ವೀಕ್ಷಿಸಲು 2000 ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದರು. ನಟಿಯನ್ನು ಸ್ವಾಗತಿಸಲು ಕಾರ್ಯಕ್ರಮದ ಸಮಯದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳ ಹಲವಾರು ಹಾಡುಗಳನ್ನು ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡರು ರಶ್ಮಿಕಾ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.