ನವದೆಹಲಿ: ಮಧ್ಯಪ್ರದೇಶ, ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ವಿಧಾನ ಕ್ಷೇತ್ರಗಳ 13 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ INDIA ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ.
ಲೋಕಸಭೆ ಚುನಾವಣೆಯಂತೆ ಉಪಚುನಾವಣೆಯಲ್ಲೂ ಬಿಜೆಪಿಗೆ ಇಂಡಿಯಾ ಒಕ್ಕೂಟ ಶಾಕ್ ಕೊಟ್ಟಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು 13 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದು ಬೀಗಿದೆ. ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಆಡಳಿತಾರೂಢ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದು ಹೀನಾಯ ಪ್ರದರ್ಶನ ನೀಡಿದೆ.
ಉಪಚುನಾವಣೆಯ ವಿಜಯಶಾಲಿಗಳು
ಪಶ್ಚಿಮ ಬಂಗಾಳ: * ಉತ್ತರ 24 ಪರಗಣ ಜಿಲ್ಲೆಯ ಬಾಗ್ಡಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮಧುಪರ್ಣಾ ಠಾಕೂರ್ ಅವರಿಗೆ ಗೆಲುವು
* ಉತ್ತರ 24 ಪರಗಣದ ರಾಣಾಘಾಟ್ ದಕ್ಷಿಣದಲ್ಲಿ ಟಿಎಂಸಿಯ ಮುಕುತ್ ಮಣಿ ಅಧಿಕಾರಿ ಅವರಿಗೆ ಜಯ
* ಕೋಲ್ಕತಾದ ಮಾಣಿಕ್ತಾಲಾದಲ್ಲಿ ಟಿಎಂಸಿಯ ನಾಮನಿರ್ದೇಶಿತ ಅಭ್ಯರ್ಥಿ ಸುಪ್ತಿ ಪಾಂಡೆ ಅವರಿಗೆ ಗೆಲುವು
* ಉತ್ತರ ದಿನಾಜ್‌ಪುರ ಜಿಲ್ಲೆಯ ರಾಯಗಂಜ್ನಲ್ಲಿ ಟಿಎಂಸಿಯ ಕಲ್ಯಾಣಿ ಅವರಿಗೆ ಜಯ
ಪಂಜಾಬ್: * ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಪ್ನ ಮೊಹಿಂದರ್ ಭಗತ್ ಅವರಿಗೆ ಜಯ
ಹಿಮಾಚಲ ಪ್ರದೇಶ: * ಡೆಹ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕಮಲೇಶ್ ಠಾಕೂರ್ ಅವರಿಗೆ ವಿಜಯ
* ನಲಗಢ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹರ್ದೀಪ್ ಸಿಂಗ್ ಬಾವಾ ಭರ್ಜರಿ ಗೆಲುವು
* ಹಮೀರ್‌ಪುರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ರೋಚಕ ಜಯ
ಮಧ್ಯಪ್ರದೇಶ: * ಅಮರವಾರ್ ಕ್ಷೇತ್ರದಲ್ಲಿ ಬಿಜೆಪಿಯ ಕಮಲೇಶ್ ಪ್ರತಾಪ್ ಅವರಿಗೆ ಜಯ
ತಮಿಳುನಾಡು: ವಿಕ್ರವಾಂಡಿ ಕ್ಷೇತ್ರದಲ್ಲಿ ಡಿಎಂಕೆಯ ಅಣ್ಣಿಯುರ್ ಶಿವ ಅವರಿಗೆ ಗೆಲುವು
ಬಿಹಾರ: ರುಪೌಲಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಅವರಿಗೆ ವಿಜಯ
ಉತ್ತರಾಖಂಡ: ಬದ್ರಿನಾಥ ಕ್ಷೇತ್ರದಲ್ಲಿ ಕಾಂಗ್ರೆಸ್ನ ಲಖ್ಪತ್ ಸಿಂಗ್ ಬಟೊಲಾ ಗೆಲುವು ಮಂಗ್ಲೌರ್ ಕ್ಷೇತ್ರದಲ್ಲಿ ಕ್ವಾಜಿ ಮೊಹಮ್ಮದ್ ನಿಜಾಮುದ್ದೀನ್ ಜಯ