ಡೆಂಗ್ಯೂ ಕಡ್ಡಾಯ ಪರೀಕ್ಷೆ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚು ಕಂಡು ಬಂದಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೌದು, ಡೆಂಗ್ಯೂ ಪ್ರಕರಣದ ಪ್ರದೇಶಗಳಲ್ಲಿ ಯಾರಿಗೆ ಜ್ವರ ಕಂಡುಬಂದರೂ, ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿರುವ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ CEO ಅವರಿಗೆ ಸೂಚನೆ ನೀಡಿದ್ದಾರೆ. ಪಕ್ಕದ ರಾಜ್ಯದಲ್ಲಿ ಝೀಕಾ ವೈರಸ್ ಕಂಡುಬಂದಿರುವುದರಿಂದ ರಾಜ್ಯದಲ್ಲೂ ಈ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಈ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ, 17,000ದಿಂದ ಸಂಬಳ
ಮಕ್ಕಳಲ್ಲಿ ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ..!
ತೀವ್ರ ಜ್ವರ, ಅದರಲ್ಲೂ 104 ಡಿ.ಫ್ಯಾ. ಸಮೀಪ ಇರುವುದು, ಕಣ್ಣುಗಳ ಹಿಂದೆ ನೋವು, ಸ್ನಾಯು, ಕೀಲು ಮತ್ತು ಮೂಳೆಗಳಲ್ಲಿ ವಿಪರೀತ ನೋವು, ಅತೀವ ತಲೆನೋವು, ಮೈಮೇಲೆ ದದ್ದುಗಳು, ಮೂಗು ಅಥವಾ ದಂತದಲ್ಲಿ ಸ್ವಲ್ಪ ರಕ್ತಸ್ರಾವ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.
ಮೊದಲಿಗೆ ಫ್ಲೂ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಜ್ವರಕ್ಕೆ ಮಕ್ಕಳು ಸುಸ್ತಾಗಿ ಹೈರಾಣಾಗುವುದು, ಹಠ ಮಾಡುವುದು, ಕಿರಿಕಿರಿ, ಮೈಯೆಲ್ಲಾ ತುರಿಕೆ ಮುಂತಾದವುಗಳು ಮಕ್ಕಳಲ್ಲಿ ಡೆಂಗ್ಯು ಜ್ವರದ ಲಕ್ಷಣಗಳಾಗಿವೆ.
ಇದನ್ನು ಓದಿ: ಸೆ.15 ರವರೆಗೆ ‘HSRP’ ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ: ಹೈಕೋರ್ಟ್