aadhar link ration card karnataka: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು, ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್ ಕೊಟ್ಟಿದ್ದು, ಗ್ರಾಹಕರ ಪಡಿತರ ಚೀಟಿಗಳ ಜೊತೆ ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್ 30, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.
ಹೌದು, ಅನೇಕ ಫಲಾನುಭವಿಗಳು ತಮ್ಮ ಕುಟುಂಬದ ಸದಸ್ಯರ ಆಧಾರ್ ಜೋಡಣೆ ಮಾಡಿಲ್ಲ. ಹೀಗೆ ಮಾಡಲು ವಿಫಲವಾದರೆ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ. ಇನ್ನು ಈ ಕೆಲಸ ಮಾಡದವರಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ ದಿನಾಂಕವನ್ನು ವಿಸ್ತರಿಸಿದೆ.
ಇದನ್ನು ಮೊದಲು ಜೂನ್ 30ಕ್ಕೆ ನಿಗದಿಪಡಿಸಲಾಗಿತ್ತು. ಈಗ ಪಡಿತರ ಚೀಟಿಗಳ ಜೊತೆ ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್ 30, 2024 ರವರೆಗೆ ವಿಸ್ತರಿಸಲಾಗಿದೆ