ನೀವು ಈ ನುಗ್ಗೆಕಾಯಿ ಸಾಂಬಾರ್‌ಗೆ ಮಾರುಹೋಗುವಂತಹ ಜನ ಆಗಿರಬಹುದು. ಆದ್ರೆ ಈ ನುಗ್ಗೆ ಸೊಪ್ಪಿನಲ್ಲಿ ನೀವು ಅಚ್ಚರಿ ಪಡುವಷ್ಟು ಆರೋಗ್ಯಕರ ಅಂಶಗಳು ಅಡಗಿವೆ. ನಿಮ್ಮ ಮನೆಯಲ್ಲೊಂದು ನುಗ್ಗೆ ಮರ ಇದ್ದರಂತು ಅದರ ಪ್ರಯೋಜನವನ್ನ ಪಡೆಯಲು ಎಂದಿಗೂ ಮರೆಯಬೇಡಿ. ಏಕೆಂದರೆ ಹಲವು ಸಮಸ್ಯೆಗಳಿಗೆ ಈ ನುಗ್ಗೆ ಸೊಪ್ಪಿನಲ್ಲಿ ಪರಿಹಾರದ ಮಾರ್ಗವಿದೆ.
ನುಗ್ಗೆಮರದ ಎಲೆ, ಕಾಯಿ, ಹೂವು ಮೊಗ್ಗುಗಳೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಅದರಲ್ಲೂ ನುಗ್ಗೆ ಎಲೆಗಳ ಸೇವನೆಯಿಂದ ಹಲವಾರು ತೊಂದರೆಗಳಿಗೆ ಔಷಧಿಯ ಪರಿಣಾಮವನ್ನೇ ಪಡೆಯಬಹುದು. ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ನಂಬಿದ್ದಾರೆ.
ನುಗ್ಗೆ ಸೊಪ್ಪಿನ ಜ್ಯೂಸ್
ಸರ್ವ ರೋಗಕ್ಕೂ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ತಡೆಯೊಡ್ಡುತ್ತದೆ. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಈ ನುಗ್ಗೆ ಸೊಪ್ಪಿನಲ್ಲಿದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ನೀವು ನುಗ್ಗೆ ಸೊಪ್ಪಿನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಜ್ಯೂಸ್ ಮಾಡಿ ಕುಡಿಯಬೇಕು.
ರಕ್ತ ಹೀನತೆಗೆ ಇದು ರಾಮಬಾಣ